ಬೆಳಗಾವಿ: ನಾವು ಹಿಂದೂಗಳೇ, ಹುಟ್ಟಿದ್ದು ಹಿಂದೂವಾಗಿ ಸಾಯುವುದೂ ಹಿಂದೂವಾಗಿಯೇ,ಬಿಜೆಪಿಯವರದ್ದು ಬರೀ ನಾಟಕ. ಒಳಗಿನಿಂದ ನಮ್ಮಲ್ಲಿ ಹಿಂದುತ್ವವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸ್ಪೀಕರ್ ಅವರು ಗಾಂಧಿ,ಅಂಬೇಡ್ಕರ್ ಮತ್ತಿತರ ಮಹನೀಯರ ಫೋಟೋ ಹಾಕುವುದಾಗಿ ತಿಳಿಸಿದ್ದರು. ಆದರೆ ಸಾವರ್ಕರ್ ಫೋಟೋ ಹಾಕಿದ್ದಾರೆ.ಅವರಿಗೂ ನಮ್ಮ ರಾಜ್ಯಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು
ಸಾವರ್ಕರ್ ವಿವಾದಾತ್ಮಕ ವ್ಯಕ್ತಿ ಅಂತ ಎಲ್ಲರಿಗೂ ಗೊತ್ತು,ಆದರೆ ಅವರ ಫೋಟೊ ಹಾಕುವ ಮೂಲಕ ಬಿಜೆಪಿ ಅಧಿವೇಶನಕ್ಕೆ ಅಡ್ಡಿ ತರಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.
ಫೋಟೋ ವಿಚಾರವಾಗಿ ನನಗೆ ಗೊತ್ತೆ ಇಲ್ಲಾ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ. ಅವರು ಸುಳ್ಳಿನ ರಾಜ. ಮುಖ್ಯಮಂತ್ರಿಗಳಿಗೆ ಸುಳ್ಳಿನ ರಾಜ ಅಂತ ಕರೆಯಬೇಕಾಗುತ್ತದೆ ಎಂದು ಡಿಕೆಶಿ ಕಿಡಿಕಾರಿದರು.
ಸ್ವಾತಂತ್ರಕ್ಕಾಗಿ ಸಾವರ್ಕರ್ ಕೊಡುಗೆ ಇಲ್ಲ, ಅವರು ತಪ್ಪು ಒಪ್ಪಿಕೊಂಡು ಪತ್ರ ಬರೆದು ಕೊಟ್ಟಿದ್ದರು. ಅವರು ಬ್ರಿಟಿಷರ ಜೊತೆ ಕೈ ಜೋಡಿಸಿದ್ದರು.
40%ಕಮೀಷನ್, ಮತದಾರರ ಪಟ್ಟಿ ಹಗರಣ ಯಾವುದೂ ಚರ್ಚೆ ಆಗಬಾರದು ಅಂತ ಬಿಜೆಪಿಯವರು ಫಟೋ ಹಾಕಿ ವಿವಾದ ಮಾಡುತ್ತಿದ್ದಾರೆ ಎಂದು ಡಿಕೆಶಿ ಆರೋಪಿಸಿದರು.

