ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ನೀಡಲಿ -ಅಶೋಕ್ ಹೇಳಿಕೆ

ಬೆಂಗಳೂರು: ಜನಸಂಖ್ಯೆ ಆಧಾರದಲ್ಲಿ ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ನೀಡುವ‌ ಅಗತ್ಯವಿದೆ ಎಂದು ಸಚಿವ ಆರ್.ಅಶೋಕ್ ಅಭಿಪ್ರಾಯ ಪಟ್ಟಿದ್ದಾರೆ.

ಒಕ್ಕಲಿಗ ಶಾಸಕರ ನಿಯೋಗದೊಂದಿಗೆ  ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಭೇಟಿಯಾಗಿ ಒಕ್ಕಲಿಗ ಸಮುದಾಯದ ಮೀಸಲಾತಿ  ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ ನಂತರ ಅಶೋಕ್ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದರು.

ಒಕ್ಕಲಿಗ ಸಮುದಾಯದವರ  ಬೇಡಿಕೆ ನ್ಯಾಯಯುತವಾಗಿದೆ. ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಬೇಕು ಎಂದು ಹೇಳಿದರು.

ಸಮುದಾಯದ ಶ್ರೀಗಳು ಮನವಿ ಸಲ್ಲಿಸಿದ್ದಾರೆ.  ನಾನು ಆ ಮನವಿಯನ್ನ ಬೊಮ್ಮಾಯಿಯವರಿಗೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

ನಗರ ಪ್ರದೇಶದಲ್ಲಿ ಒಕ್ಕಲಿಗರಿಗೆ ಮೀಸಲಾತಿ ಇಲ್ಲ. ಹೀಗಾಗಿ ನಗರ ಪ್ರದೇಶದ ಒಕ್ಕಲಿಗರಿಗೂ ಮೀಸಲಾತಿ ನೀಡಬೇಕಿದೆ,ಈ ಬಗ್ಗೆ ಸಿಎಂ ಕೂಡ ಭರವಸೆ ನೀಡಿದ್ದಾರೆ. ಬೊಮ್ಮಾಯಿ ಅವರ ಮೇಲೆ ನಮಗೆ ಅಚಲವಾದ ನಂಬಿಕೆ ಇದೆ ಎಂದು ಅಶೋಕ್ ಹೇಳಿದರು.