ಕಲ್ಬುರ್ಗಿ: ಇಡೀ ದೇಶವನ್ನೇ ಚಿಕಿತಗೊಳಿಸಿದ್ದ ಪಿಎಸ್ ಐ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಬಂಧನದಲ್ಲಿದ್ದ ಪ್ರಮುಖರಿಗೆ ಜಾಮೀನು ಸಿಕ್ಕಿದೆ
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಮಂದಿ ಆರೋಪಿಗಳಿಗೆ ಕಲ್ಬುರ್ಗಿ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ದಿವ್ಯಾ ಹಾಗರಗಿ , ಮಂಜುನಾಥ್ ಮೇಳಕುಂದಿ , ಡಿವೈಎಸ್ಪಿ ಮಲ್ಲಿಕಾರ್ಜುನ ಸೇರಿ 26 ಮಂದಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಕಲ್ಬುರ್ಗಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ ಪಾಟೀಲ್ ಅವರು ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರಾಗಿರುವುದರಿಂದ ತನಿಖೆಯ ಹಾದಿ ಎತ್ತ ಸಾಗಲಿದೆ ಎಂದು ಪಿಎಸ್ ಐ ಕೆಲಸಕ್ಕೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಅರ್ಹತೆ ಪಡೆದವರ ಪ್ರಶ್ನೆಯಾಗಿದೆ.

