ಶ್ರೀ ಪಲಿಮಾರು ಮಠದ ಶ್ರೀಗಳಿಗೆ ಅಭಿವಂದನೆ

ಮೈಸೂರು: ಮಹಾಭಾರತದಲ್ಲಿ ವಿರಾಟ ಪರ್ವ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಪ್ರವಚನಕಾರರಾಗಿ ಆಗಮಿಸಿರುವ ಉಡುಪಿಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹಾಗೂ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರುಗಳಿಗೆ ಅಭಿವಂದನೆ ಸಲ್ಲಿಸಲಾಯಿತು.

ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮದಲ್ಲಿ ಶ್ರೀಕೃಷ್ಣ ಮಿತ್ರ ಮಂಡಳಿ, ಶ್ರೀ ಕೃಷ್ಣ ಟ್ರಸ್ಟ್ ಮತ್ತು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಸಹಯೋಗದೊಂದಿಗೆ  ಶ್ರೀಗಳಿಗೆ ಅಭಿವಂದನೆ ಸಲ್ಲಿಸಲಾಯಿತು

ವೇಳೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಮಾತನಾಡಿ

ದೇವರ ಪೂಜೆ, ಧಾರ್ಮಿಕ ಕಾರ್ಯಕ್ರಮ, ಹವನ, ಹೋಮ, ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಆನಂತರ ಶ್ರೀಗಳು ಮಹಾಭಾರತದಲ್ಲಿನ ವಿರಾಟ ಪರ್ವ ಪ್ರವಚನ ನೀಡಿದರು.

ಕೃಷ್ಣ ಮಿತ್ರ ಮಂಡಳಿಯ ಅಧ್ಯಕ್ಷ ಸುಬ್ರಹ್ಮಣ್ಯ ತಂತ್ರಿ,ಪೂಜ್ಯ ಇಳೈಆಳ್ವಾರ್ ಸ್ವಾಮೀಜಿಹಿರಿಯ ಸಮಾಜಸೇವಕರ ಕೆ. ರಘುರಾಮ್ ವಾಜಪೇಯಿ, ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಸುಬ್ರಮಣ್ಯ ತಂತ್ರಿ,ಉಪಾಧ್ಯಕ್ಷರ ಪುಟ್ಟಣ್ಣ ಭಟ್, ಕೃಷ್ಣದಾಸ ಪುರಾಣಿಕ, ರವಿ ಶಾಸ್ತ್ರಿ, ನಗರಪಾಲಿಕೆ ಸದಸ್ಯರಾದ ಮಾ. ವಿ. ರಾಮಪ್ರಸಾದ್, ಕಡಕೋಳ ಜಗದೀಶ್,

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿಜ್ಞೇಶ್ವರ ಭಟ್, ಎಸ್. ಬಿ. ವಾಸುದೇವಮೂರ್ತಿ, ನಾಗಶ್ರೀ ಸುಚಿಂದ್ರ, ಮತ್ತಿತರರು ಭಾಗವಹಿಸಿದ್ದರು.