ಸ್ಯಾಂಟ್ರೋ ರವಿ ಪ್ರಾಥಮಿಕ ಹಂತದ ವಿಚಾರಣೆ ಮುಕ್ತಾಯ – ಎಡಿಜಿಪಿ

ಮೈಸೂರು, ಜ. 14-  ಸ್ಯಾಂಟ್ರೋ ರವಿಯ ಪ್ರಾಥಮಿಕ ಹಂತದ ವಿಚಾರಣೆ ಮುಕ್ತಾಯವಗಿದ್ದು ಎಡಿಜಿಪಿ ಅಲೋಕ್ ಕುಮಾರ್ ಮೈಸೂರಿನ ವಿಜಯನಗರ ಠಾಣೆಗೆ ಆಗಮಿಸಿ ತನಿಖಾ ಪ್ರಕ್ರಿಯೆಯ ಮಾಹಿತಿ ಪಡೆದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ ಸ್ಯಾಂಟ್ರೋ ರವಿಯ ಎರಡನೆ ಪತ್ನಿ ವಿಜಯನಗರ ಠಾಣೆಗೆ ಕೊಟ್ಟಿರುವ ದೂರುಗಳ ಬಗ್ಗೆ ಮೊದಲು ವಿಚಾರಣೆ ನಡೆಯಲಿದೆ ಎಂದು ತಿಳಿಸಿದರು.

ಸ್ಯಾಂಟ್ರೋ ರವಿಯ ಬಗ್ಗೆ ಇರುವ ಇತರೆ ಕೇಸುಗಳ ಬಗ್ಗೆ ಆನಂತರ ತನಿಖೆ ಮುಂದುವರಿಯಲಿದೆ ಎಂದು ಹೇಳಿದರು

ನಂತರ ‌ನ್ಯಾಯಾಧೀಶರ ಮುಂದೆ ಹಾಜರು  ಪಡಿಸಿ ನಾಲ್ಕು ದಿನಗಳ ಕಾಲ ಪೊಲೀಸ್ ಕಷ್ಟಡಿಗೆ ಅನುಮತಿ ಕೇಳಲಿದ್ದೇವೆ ಎಂದು ತಿಳಿಸಿದರು.