ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿದ ಸರ್ಕಾರ

ಮೈಸೂರು: ಸ್ಯಾಂಟ್ರೊ ರವಿ ಪ್ರಕರಣವನ್ನು ಸಿಐಡಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.

ಇದರ ನಡುವೆ ಸ್ಯಾಂಟ್ರೊ ರವಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸ ಲಾಯಿತು.

ವೇಳೆ ಸ್ಯಾಂಟ್ರೊ ರವಿಯನ್ನು ಪೋಲಿಸ್ ಕಸ್ಟಡಿಗೆ ನೀಡುವಂತೆ ಸರ್ಕಾರಿ ಅಭಿಯೋಜಕರು ಮನವಿ ಮಾಡಿದರು.

ಆದರೆ ಸ್ಯಾಂಟ್ರೊ ರವಿ ಏನೂ ತಪ್ಪು ಮಾಡಿಲ್ಲ, ಸಂತ್ರಸ್ತ ಮಹಿಳೆಯನ್ನು ಮದುವೆ ಆಗಿರುವ ಬಗ್ಗೆ ಯಾವುದೇ ಸಾಕ್ಷಿ ಇಲ್ಲ,ಹಾಗಾಗಿ ಸ್ಯಾಂಟ್ರೊ ರವಿಯನ್ನು ಪೋಲಿಸ್ ಕಸ್ಟಡಿಗೆ ನೀಡುವ ಅವಶ್ಯಕತೆ ಇಲ್ಲ ಎಂದು ಆರೋಪಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಸ್ಯಾಂಟ್ರೊ ರವಿಯನ್ನು ಮೈಸೂರಿನ 6 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ್ ಮುಂದೆ ಹಾಜರುಪಡಿಸಲಾಯಿತು. ವೇಳೆ ಸ್ಯಾಂಟ್ರೊ ರವಿಯನ್ನು 14 ದಿನ ಪೋಲಿಸ್ ಕಸ್ಟಡಿಗೆ ನೀಡುವಂತೆ ಸರ್ಕಾರಿ ಅಭಿಯೋಜಕರು ಮನವಿ ಮಾಡಿದರು.

ಆದರೆ ಪೋಲಿಸ್ ಕಸ್ಟಡಿಗೆ ನೀಡುವ ಕುರಿತಂತೆ ಸ್ಯಾಂಟ್ರೊ ರವಿ ಪರ ವಕೀಲ ಹರೀಶ್ ಪ್ರಭು ಆಕ್ಷೇಪ ವ್ಯಕ್ತಪಡಿಸಿದರು.

ಸ್ಯಾಂಟ್ರೊ ರವಿಗೆ ಜೀವ ಬೆದರಿಕೆ ಇದೆ. ಹಣಕಾಸಿನ ವ್ಯಾಜ್ಯವನ್ನು ವಿಜೃಂಭಿಸಿ ಹೇಳಲಾಗಿದೆ.

ಸಂತ್ರಸ್ತೆಯು ತನ್ನ ಅಕ್ಕನ ಮದುವೆಗಾಗಿ 10 ಲಕ್ಷ ರೂ. ಸಾಲ ಪಡೆದಿದ್ದರು. ಅದನ್ನು ತೀರಿಸಲಾಗದೆ ಸುಳ್ಳು ದೂರು ದಾಖಲಿಸಿದ್ದಾರೆ.

ಸಂತ್ರಸ್ತೆ ಯನ್ನು ಆರೋಪಿ ಸ್ಯಾಂಟ್ರೊ ರವಿ ಅಲಿಯಾಸ್ ಕೆ.ಆರ್.ಮಂಜುನಾಥ್ ಮದುವೆ ಆಗಿಲ್ಲ. ಹಣಕಾಸಿನ ವ್ಯಾಜ್ಯವನ್ನು ಬೇರೆ ರೀತಿ ಬಿಂಬಿಸಲಾಗಿದೆ.ಆತನ ಬಳಿ ಐಶಾರಾಮಿ ಬಂಗಲೆ, ಕಾರುಗಳು ಇಲ್ಲ.

ಅವರು ಮಧ್ಯಮ ವರ್ಗದ ಜೀವನ ನಡೆಸುತ್ತಿದ್ದಾರೆ. ಸಂತ್ರಸ್ತೆಯನ್ನು ಮದುವೆ ಆಗಿದ್ದರೆ ಇದುವರೆಗೂ ಯಾಕೆ ಸಾಕ್ಷ್ಯಾಧಾರ ಸಲ್ಲಿಸಿಲ್ಲ ಎಂದು ಹರೀಶ್ ಪ್ರಭು ಪ್ರಶ್ನಿಸಿದರು.

ಕೇವಲ ಸ್ಟೇಟಸ್ ಹಾಕಿಕೊಂಡಿರುವುದನ್ನೇ ದೊಡ್ಡ ರೀತಿಯಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ. ಆದ ಕಾರಣ ಆರೋಪಿಯನ್ನು ಪೋಲಿಸ್ ಕಸ್ಟಡಿಗೆ ನೀಡುವ ಅವಶ್ಯಕತೆ ಇಲ್ಲ ಎಂದು ಹರೀಶ್ ಪ್ರಭು ಬಲವಾದ ವಾದ ಮಂಡಿಸಿದರು.

ಆದರೆ ಸ್ಯಾಂಟ್ರೊ ರವಿ ಮೇಲೆ ಹಲವು ಗುರುತರ ಆರೋಪ ಇದೆ. ಪ್ರಕರಣ ಅಂತರಾಜ್ಯಕ್ಕೂ ವ್ಯಾಪಿಸಿರುವ ಕಾರಣ ಹಲವು ಸತ್ಯಗಳನ್ನು ತೆಗೆಯಬೇಕಿದೆ.ಹಾಗಾಗಿ ಪೋಲಿಸ್ ಕಸ್ಟಡಿಗೆ ನೀಡುವಂತೆ ಸರ್ಕಾರಿ ಅಭಿಯೋಜಕರು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ಪೋಲಿಸ್ ಕಸ್ಟಡಿಗೆ ನೀಡುವ ಅವಶ್ಯಕತೆ ಇಲ್ಲವೆಂದು ಆರೋಪಿ ಪರ ವಕೀಲರು ಮತ್ತೆ ವಾದ ಮಂಡಿಸಿದರು.

ಆಗ ಸರ್ಕಾರಿ ಅಭಿಯೋಜಕರು ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು.

ಹಿನ್ನೆಲೆಯಲ್ಲಿ ಪೋಲಿಸ್ ಕಸ್ಟಡಿಗೆ ನೀಡುವ ಕುರಿತಂತೆ ಮತ್ತಷ್ಟು ವಾದ ಮಂಡಿಸಲು ಅವಕಾಶ ನೀಡಿ ಜನವರಿ 18 ಕ್ಕೆ  ವಿಚಾರಣೆಯನ್ನು ನ್ಯಾಯಾಧೀಶರು  ಮುಂದೂಡಿದರು.

ಜೊತೆಗೆ ಸ್ಯಾಂಟ್ರೊ ರವಿಯನ್ನು ಜನವರಿ 25 ಕ್ಕೆ ನ್ಯಾಯಾಲಯಕ್ಕೆ ಹಾಜರು ಮಾಡುವಂತೆಯೂ ನ್ಯಾಯಾಧೀಶರಾದ ಗುರುರಾಜ್ ಆದೇಶ ನೀಡಿದರು.

ಇದೇ ವೇಳೆ ಸ್ಯಾಂಟ್ರೊ ರವಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಪೋಲಿಸರಿಗೂ ನ್ಯಾಯಾಧೀಶರು ತೀವ್ರ ತರಾಟೆ ತೆಗೆದುಕೊಂಡರು.

ಇನ್ನು ಮುಂದೆ ಪೊಲೀಸರು ಸ್ಯಾಂಟ್ರೋ ರವಿಯ ವಿಚಾರಣೆ ನಡೆಸುವಂತಿಲ್ಲ.ಅದೇನಿದ್ದರೂ ಇನ್ನು ಸಿ ಡಿಯವರ ಕೆಲಸ