ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 78ನೇ ಜನ್ಮ ದಿನಾಚರಣೆ

ಮೈಸೂರು: ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದ ವತಿಯಿಂದ ಶ್ರೀ ಆದಿ ಚುಂಚನಗಿರಿ ಪಿಠಾಧ್ಯಕ್ಷರಾದ ಬೈರವೈಕ್ಯ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 78ನೇ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಯಿತು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ವೇಳೆ ಮಾತನಾಡಿದ ಹಿರಿಯ ಸಾಹಿತಿ ಹಾಗೂ ಮಹಾಸಭಾದ ಗೌರವಾಧ್ಯಕ್ಷರಾದ  ಡಾ. ಸಿ . ಪಿ. ಕೆ ರವರು, ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ಅವರು ಕೇವಲ ಮಠಾಧೀಶರಾಗಿರಲಿಲ್ಲ ಒಂದು ಬೃಹತ್ತಾದ ವಿಶ್ವವಿದ್ಯಾನಿಲಯವನ್ನೇ ಕಟ್ಟಿದಂತಹ ಮಹಾ ಚೇತನ ಎಂದು ಬಣ್ಣಿಸಿದರು.

ಅದಕ್ಕಾಗಿ ಅವರನ್ನು ಒಬ್ಬ ಕುಲಪತಿ ಎಂದು ಕರೆಯಬೇಕು, ಎಲ್ಲಾ ಮಠಾಧೀಶರಂತೆ  ಅವರು ಅಲ್ಲ,ಒಂದು ವಿಶಿಷ್ಟವಾದ ವ್ಯಕ್ತಿತ್ವ  ಉಳ್ಳವರಾಗಿದ್ದರು. ಜನೋಪಯೋಗಿ ಹಾಗೂ ಸಮಾಜಮುಖಿಯಾದಂತ ಅನೇಕ ಸಾಧನೆಯನ್ನು ಅವರು ಮಾಡಿದ್ದರು ಎಂದು ಸ್ಮರಿಸಿದರು.

ಎಲ್ಲಕ್ಕಿಂತಲೂ ಮೇಲಾಗಿ ಒಬ್ಬ ಸಮರ್ಥ ಉತ್ತರಾಧಿಕಾರಿಯನ್ನಾಗಿ ಅವರು ತಯಾರು ಮಾಡಿ ನೇಮಿಸಿದ್ದರು.

ಇಂತಹ  ಮಹಾಪುರುಷರ ಜನ್ಮದಿನವನ್ನು  ಪುಷ್ಪಾರ್ಚನೆ ಮಾಡಿ ಸಿಹಿ ವಿತರಣೆ ಮಾಡುತ್ತಿರುವುದಕ್ಕೆ ನಾನು ವಂದನೆ ಸಲ್ಲಿಸುವೆ.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಅಧ್ಯಕ್ಷ ಎನ್. ಬೆಟ್ಟೇಗೌಡ ಮತ್ತು ಅವರ ತಂಡಕ್ಕೆ ತುಂಬು ಹೃದಯದ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಹೇಳಿದರು.

ಸಂದರ್ಭದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸವಾದ ಸಂಸ್ಥಾಪಕ ಅಧ್ಯಕ್ಷರಾದ ಎನ್. ಬೆಟ್ಟೇಗೌಡ ಪ್ರಧಾನ ಕಾರ್ಯದರ್ಶಿ .ಸಿ. ನಿಂಗರಾಜ ಗೌಡ್ರು, ಕೋಶಾಧ್ಯಕ್ಷ ಎಂ.ಎನ್. ಚಂದ್ರಶೇಖರ್ ನಿರ್ದೇಶಕರಾದ ರವಿಕುಮಾರ್, ನಾಗೇಂದ್ರ  ಲಕ್ಷ್ಮಿ ದೇವಿ, ವಾಸುದೇವ್, ಸಂಸ್ಕೃತಿ ಚಿಂತಕರಾದ ಡಾ. ರಘುರಾಮ್ ವಾಜಪೇಯಿ, ಕನ್ನಡ ಹೋರಾಟಗಾರರಾದ ಶಿವಶಂಕರ್, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ಕ್ಯಾತನಹಳ್ಳಿ ಪ್ರಕಾಶ್, ಹೇಮಂತ್, ವಜ್ರೇಶ್ವರಿ ಉಮೇಶ್ಮೈನಾ ಸ್ವಾಮಿ, ಎಸ್. ಎನ್. ರಾಜೇಶ್ ಮತ್ತಿತರರು ಹಾಜರಿದ್ದರು.