ರಥ ಸಪ್ತಮಿಗೆ ಮೈಸೂರು ಅರಮನೆಯಲ್ಲಿ ಸಪ್ತ ದೇವರ ಸಮಾಗಮ

ಮೈಸೂರು: ವಿಶ್ವಪ್ರಸಿದ್ದ ಅಂಬಾವಿಲಾಸ ಅರಮನೆ ಆವರಣದಲ್ಲಿ  ರಥಸಪ್ತಮಿಯ ಸಡಗರ ಮನೆ ಮಾಡಿದೆ.

ಅರಮನೆ ಆವರಣದಲ್ಲಿರುವ 18 ದೇವಾಲಯಗಳ ಪೈಕಿ 7 ದೇವಸ್ಥಾನದ ಉತ್ಸವಮೂರ್ತಿಯನ್ನ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಯಿತು.

ಶನಿವಾರ ಮುಂಜಾನೆ ವಿಶೇಷ ಪೂಜೆ ನಂತರ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಭಕ್ತರು, ಪ್ರವಾಸಿಗರು ಆಗಮಿಸಿ ಸಪ್ತ ರಥಗಳ ದರುಶನ ಪಡೆದರು.

 ಗಾಯಿತ್ರಿ, ತ್ರಿನಯನೇಶ್ವರ, ಲಕ್ಷ್ಮೀರಮಣ, ಅಂಬುಜವಲ್ಲಿ, ಭುವನೇಶ್ವರಿ, ಪ್ರಸನ್ನ ಲಕ್ಷ್ಮಿ, ಖಿಲ್ಲೆ ವೆಂಕಟರಮಣಸ್ವಾಮಿ ದೇವರುಗಳ ಉತ್ಸವಮೂರ್ತಿಯನ್ನ ಪ್ರತಿಷ್ಟಪಿಸಿ ಪೂಜೆ ನೆರವೇರಿಸಲಾಯಿತು.

ಸೂರ್ಯದೇವ ತನ್ನ ಪಥ ಬದಲಿಸುವ ದಿನವನ್ನು ರಥಸಪ್ತಮಿ ಎಂದು ಆಚರಿಸಲಾಗುತ್ತದೆ.

ಹಿಂದಿನಿಂದಲೂ ಎಕ್ಕದ ಎಲೆಯನ್ನ ಇಟ್ಟು ಅಭ್ಯಂಜನ ಸ್ನಾನ ಮಾಡುವ ಆಚರಣೆ ಜನರಲ್ಲಿದೆ.

ರಥ ಸಪ್ತಮಿಯ ದಿನ ಅರಮನೆ ಆವರಣದಲ್ಲಿ 7 ದೇವರಿಗೂ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.7 ದೇವರ ಉತ್ಸವಮೂರ್ತಿಯ ಸಮಾಗಮವನ್ನು ಭಕ್ತರು ಕಣ್ತುಂಬಿಕೊಂಡರು.

ರಥಗಳಿಗೆ ಹಾಗೂ ದೇವ,ದೇವತೆಗಳಿಗೆ ನಮಿಸಿ ಮಂಗಳಾರತಿ ಪಡೆದರು.