ಮೈಸೂರು: ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 13ನೆಯ ಘಟಿಕೋತ್ಸವ ಫೆಬ್ರವರಿ 6ರಂದು ಬನ್ನಿಮಂಟಪ ಬಡಾವಣೆಯಲ್ಲಿರುವ ಜೆ ಎಸ್ ಎಸ್ ವೈದ್ಯಕೀಯ ಮಹಾವಿದ್ಯಾಲಯದ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಜರುಗಲಿದೆ ಎಂದು ಸಂಸ್ಥೆಯ ವೈಸ್ ಚಾನ್ಸಲರ್ ಡಾ. ಸುರೀಂದರ್ ಸಿಂಗ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಫೆ.6ರಂದು ಬೆಳಿಗ್ಗೆ 11ಗಂಟೆಗೆ ಘಟಿಕೋತ್ಸವ ಜರುಗಲಿದೆ ಎಂದು ಹೇಳಿದರು.
ಜೆ ಎಸ್ ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತರಕಾರಿ ವಾಹಕ ರಾಗಿರುವ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದತ್ತಾತ್ರೇಯ ಹೊಸ ಬಾಳೆಯವರು ಘಟಿಕೋತ್ಸವ ಭಾಷಣ ಮಾಡಿ ನಂತರ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪದಗಳು ವಿತರಿಸಲಿದ್ದಾರೆ ಎಂದು ತಿಳಿಸಿದರು.
ಈ ಘಟಿಕೋತ್ಸವದಲ್ಲಿ ಆನ್ಲೈನ್ ಮೂಲಕ ಅಕಾಡೆಮಿಯ ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ಸದಸ್ಯರು ಮತ್ತು ದೇಶದ ಶೈಕ್ಷಣಿಕ ಆಡಳಿತ ಮತ್ತು ಕೈಗಾರಿಕಾ ವಲಯದ ಗಣ್ಯತಿ ಗಣ್ಯರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ವಿವಿಧ ನಿಕಾಯಗಳಿಗೆ ಸೇರಿದ ಒಟ್ಟು 2339 ಪದವೀಧರರು ಪದವಿ ಮತ್ತು ಡಿಪ್ಲೋಮಗಳನ್ನು ಪಡೆಯಲಿದ್ದಾರೆ.
65 ವಿದ್ಯಾರ್ಥಿಗಳಿಗೆ ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರಧಾನ ಮಾಡಲಾಗುತ್ತಿದೆ, 25 ವಿದ್ಯಾರ್ಥಿಗಳಿಗೆ ಮಾಸ್ಟರ್ ಆಫ್ ಫಿಲಾಸಫಿ ಪದವಿ ಪ್ರಧಾನ ಮಾಡಲಾಗುತ್ತಿದೆ, ಆರು ವಿದ್ಯಾರ್ಥಿಗಳು ಡಾಕ್ಟರೇಟ್ ಆಫ್ ಮೆಡಿಸನ್ ಮತ್ತು ಎಂ ಸಿ ಹೆಚ್ ಪದವಿ ಪಡೆಯಲಿದ್ದಾರೆ, 60 ಟಾಪರ್ಸ್ ಗಳಿಗೆ ಅವರವರ ಶೈಕ್ಷಣಿಕ ಸಾಧನೆಗಾಗಿ 83 ಪದಕಗಳನ್ನು ಮತ್ತು ಪ್ರಮಾಣ ಪತ್ರಗಳನ್ನು ನೀಡಲಾಗುವುದು ಎಂದು ಅವರು ವಿವರಿಸಿದರು.

