ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ವಿಧಿವಶ

ಚನ್ನೈ: ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಇಂದು ವಿಧಿವಶರಾಗಿದ್ದಾರೆ.

ಅವರಿಗೆ ಇಪ್ಪತ್ತೆಂಟು ವರ್ಷಗಳಾಗಿತ್ತು.ಕಳೆದ ಎರಡು ದಿನಗಳ ಹಿಂದೆ ಬಿದ್ದು ತಲೆಗೆ‌ ಪೆಟ್ಟು ಬಿದ್ದಿದ್ದರಿಂದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಇಂದು ಬೆಳಿಗ್ಗೆ ಚನ್ನೈನ ತಮ್ಮ ನಿವಾಸದಲ್ಲಿ  ವಾಣಿಯವರು ಕೊನೆಯುಸಿರೆಳೆದಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಅವರು ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

ಕನ್ನಡ,ತಮಿಳು‌ ಹಿಂದಿ ಬಂಗಾಲಿ ತೆಲುಗು, ಮರಾಠಿ ಸೇರಿದಂತೆ ಹದಿನಾಲ್ಕು ಭಾಷೆಗಳ‌‌ ಚಲನ ಚಿತ್ರಗಳಿಗೆ ವಾಣಿ ಜಯರಾಂ ‌ಹಾಡಿದ್ದಾರೆ.

ಕನಡದಲ್ಲೇ‌  600ಕ್ಕೂ‌ ಹೆಚ್ಚು‌ ಚಿತ್ರಗಳಲ್ಲಿ ಅವರು‌‌ ಹಾಡಿದ್ದು‌‌‌ ಬಹಳಷ್ಟು ‌‌ಗೀತೆಗಳು ಹಿಟ್ಟ್ ‌ಆಗಿವೆ.

ಖ್ಯಾತ‌‌ ಗಾಯಕಿಯನ್ನು ಕಳೆದುಕೊಂಡು ಸ್ಯಾಂಡಲ್‌ವುಡ್, ತಾಲಿವುಡ್ ಸೇರಿದಂತೆ ಇಡೀ‌‌ ಚಿತ್ರರಂಗ‌ ಬಡವಾಗಿದೆ.

ಕನ್ನಡ ಚಿತ್ರರಂಗದ ಎಲ್ಲರೂ‌ ವಾಣಿ ಜಯರಾಂ ನಿಧನಕ್ಕೆ‌‌ ದುಃಖ ‌ವ್ಯಕ್ತಪಡಿಸಿದ್ದಾರೆ.