ಮೈಸೂರು: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕ್ಯಾಲೆಂಡರ್ ನಲ್ಲಿ ರಾಜಕಾರಣಿಯ ಭಾವಚಿತ್ರ ಮುದ್ರಿಸಿದ ಮುಖ್ಯಸ್ಥರಿಗೆ ಶಿಕ್ಷಣ ಇಲಾಖೆ ಚಳಿ ಬಿಡಿಸಿದೆ.
ನಿಯಮಗಳನ್ನ ಉಲ್ಲಂಘಿಸಿ ಭಾವಚಿತ್ರ ಮುದ್ರಿಸಿದ ಸಂಘದ ಅಧ್ಯಕ್ಷ,ಪ್ರಧಾನ ಕಾರ್ಯದರ್ಶಿ ಹಾಗೂ ಖಜಾಂಚಿಗೆ ಕ್ಷೇತ್ರ ಶಿಕ್ಷಾಧಿಕಾರಿಗಳು ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
2023 ಚುನಾವಣಾ ವರ್ಷ.ಇಂತಹ ಸಂದರ್ಭದಲ್ಲಿ ಸರ್ಕಾರಿ ನೌಕರರ ಅಧಿಕೃತ ಸಂಘದ ವತಿಯಿಂದ ಯಾವುದೇ ರಾಜಕಾರಣಿಗೆ ಪ್ರಚಾರ ನೀಡುವಂತಿಲ್ಲ.
ಹಾಗಿದ್ದರೂ ಸಂಘದ ನಿರ್ದೇಶಕರಿಗಾಗಲಿ ಅಥವಾ ಸದಸ್ಯರ ಗಮನಕ್ಕೆ ತಾರದೆ ಜಯಪ್ರಕಾಶ್ ಚಿಕ್ಕಣ್ಣ ರವರ ಭಾವಚಿತ್ರವನ್ನ ಕ್ಯಾಲೆಂಡರ್ ನಲ್ಲಿ ಮುದ್ರಿಸಲಾಗಿದೆ.
ಕರ್ನಾಟಕ ನಾಗರೀಕ ಸೇವಾ(ನಡತೆ)ನಿಯಮ ಉಲ್ಲಂಘಿಸಲಾಗಿದೆ ಎಂದು ಪರಿಗಣಿಸಿ ಹೆಚ್.ಡಿ.ಕೋಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಂಘದ ಅಧ್ಯಕ್ಷರಾದ ಚಂದ್ರಕುಮಾರ್, ಪ್ರಧಾನ ಕಾರ್ಯದರ್ಶಿ ಆಂಥೋಣಿ ಸ್ವಾಮಿ ಹಾಗೂ ಖಜಾಂಚಿ ಯಶ್ವಂತ್ ಕುಮಾರ್ ರವರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ.
ಸಧ್ಯ ರಾಜಕಾರಿಣಿಯ ಭಾವಚಿತ್ರ ವಿರುವ ಕ್ಯಾಲೆಂಡರ್ ವಿತರಿಸದಂತೆ ಕ್ಷೇತ್ರಶಿಕ್ಷಣಾಧಿಕಾರಿಗಳು ಸೂಚಿಸಿದ್ದಾರೆ.

