ಡಿಕೆಶಿ ಗೆ ಬಿಗ್ ರಿಲೀಫ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಕನಕಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಬಯಸಿ ಡಿಕೆಶಿ ನಾಮಪತ್ರ ಸಲ್ಲಿಸಿದ್ದರು.

ಆದರೆ ತಾಂತ್ರಿಕ ಕಾರಣಗಳಿಂದ ತಮಗೆ ತೊಂದರೆ ಆಗಬಹುದೆಂಬ ಹಿನ್ನೆಲೆಯಲ್ಲಿ ತಮ್ಮ ಸಹೋದರ ಡಿ.ಕೆ ಸುರೇಶ್ ಅವರಿಂದಲೂ ನಾಮ ಪತ್ರ ಸಲ್ಲಿಸಿದ್ದರು.

ಡಿ.ಕೆ ಶಿವಕುಮಾರ್ ಒಟ್ಟು ನಾಲ್ಕು ಸೆಟ್ ನಾಮಪತ್ರ ಸಲ್ಲಿಸಿದ್ದರು. ಅವರ ನಾಮಪತ್ರ ಅಂಗೀಕೃತಗೊಂಡಿದೆ. ಹಾಗಾಗಿ ಡಿಕೆಶಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ಡಿ.ಕೆ ಸಹೋದರರಿಬ್ಬರ ನಾಮಪತ್ರಗಳೂ ಅಂಗೀಕಾರ ಗೊಂಡಿರುವುದರಿಂದ ಇಬ್ಬರಲ್ಲಿ ಯಾರು ನಾಮಪತ್ರವನ್ನು ವಾಪಸ್ ತೆಗೆದುಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಡಿ.ಕೆ ಶಿವಕುಮಾರ್ ಅವರು ಕಳೆದ ಎರಡು ದಿನಗಳಿಂದಲೂ ತಮ್ಮ ನಾಮಪತ್ರವನ್ನು ತಿರಸ್ಕೃತಗೊಳಿಸಲು ಬಿಜೆಪಿ ಸಂಚುರೂಪಿಸುತ್ತಿದೆ, ಹಾಗಾಗಿ ತಮ್ಮ ಸಹೋದರನನ್ನು ಕಣಕ್ಕಿಳಿಸುತ್ತಿರುವುದಾಗಿ ಹೇಳಿಕೊಂಡಿದ್ದರು.

ಇದೀಗ ಅವರ ನಾಮಪತ್ರ ಅಂಗೀಕೃತ ಗೊಂಡಿರುವುದರಿಂದ ಅವರೇ ಇದಕ್ಕೆ ಸಮಾಜಾಯಿಶಿ ನೀಡಬೇಕಾಗಿದೆ.