ಕರ್ನಾಟಕದಲ್ಲಿ ಜೋಡೆತ್ತು ಸರಕಾರ ಅಧಿಕಾರಕ್ಕೆ

ಬೆಂಗಳೂರು: ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ. ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ 12.30ಕ್ಕೆ ರಾಜ್ಯದ ಸಿಎಂ ಆಗಿ ಎರಡನೇ ಬಾರಿ ಸಿದ್ದರಾಮಯ್ಯ ಹಾಗೂ ಮೊದಲ ಬಾರಿ ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಇಬ್ಬರೂ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

8 ಮಂದಿ ಸಚಿವರ ಪ್ರಮಾಣವಚನ:  ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ,  ಕೆ.ಜೆ ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್​ ಖಾನ್ ಅವರುಗಳು ಇದೇ ವೇಳೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ,ಡಿ.ಕೆ ಶಿವಕುಮಾರ್ ಅಜ್ಜಯ್ಯನ ಹೆರಿನಲ್ಲಿ,ಸತೀಶ್ ಜಾರಕಿ‌ಹೊಳಿ ಅವರು‌ ಬುದ್ದ,ಬಸವ,ಅಂಬೇಡ್ಕರ್ ಹಸರಿನಲ್ಲಿ,

ಜಮೀರ್ ಅಹಮದ್ ಖಾನ್‌ ಅಲ್ಲಾ ಹೆಸರಿನಲ್ಲಿ ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದುದು ವಿಶೇಷ.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ,ಪ್ರಿಯಾಂಕಾ ಗಾಂಧಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ,ಬಿಹಾರ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್,ರಾಜಸ್ಥಾನ ಸಿಎಂ‌ ಅಶೋಕ್ ಗೆಹ್ಲೋಟ್, ಜಮ್ಮು-ಕಾಶ್ಮೀರ‌ ಮಾಜಿ‌ ಸಿಎಂಗಳಾದ ಫಾರುಕ್ ಅಬ್ದುಲ್ಲಾ, ಮೆಹಬೂಬಾ ಮಸ್ತಿ,ಎನ್ ಸಿಪಿ ಮುಖ್ಯಸ್ಥ ಶರಾದ್ ಪವಾರ್ ಮತ್ತಿತರರು ಪಾಲ್ಗೊಂಡಿದ್ದರು.

ಚಿತ್ರ‌ ರಂಗದ ಗಣ್ಯರಾದ ಉಮಾಶ್ರೀ, ಕಮಲ‌ಹಾಸನ್,ಡಾ.ಶಿವರಾಜ್ ಕುಮಾರ್,ರಮ್ಯಾ,ದುನಿಯಾ ವಿಜಯ್,ನಿಶ್ವಕಾ ನಾಯ್ಡು,ನಿರ್ಧೇಶಕ ರಾಜೇಂದ್ರ ಸಿಂಗ್ ಬಾಬು‌,ನಿರ್ಮಾಪಕಿ‌ ಗೀತಾ ಶಿವರಾಜ್ ಕುಮಾರ್ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.

ಲಘು ಲಾಠಿ ಪ್ರಹಾರ:

ಸಿದ್ದರಾಮಯ್ಯ ಅವರು  ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ಅಭಿಮಾನಿಗಳು ಕಂಠೀರವ ಸ್ಟೇಡಿಯಂ ಒಳನುಗ್ಗಲು ಯತ್ನಿಸಿದಾಗ ನೂಕು ನುಗ್ಗಲು ಉಂಟಾದ ಕಾರಣ ಪೊಲೀಸರು ಅನಿವಾರ್ಯ ವಾಗಿ ಲಘು ಲಾಠಿ ಪ್ರಹಾರ ಮಾಡಿದರು.