ಸಿಎಂ ಸೈಲೆಂಟ್, ಡಿಸಿಎಂ ವೈಲೆಂಟ್: ಆರ್.ಅಶೋಕ್ ‌ವ್ಯಂಗ್ಯ

ಬೆಂಗಳೂರು: ರಾಜ್ಯದಲ್ಲಿ ಡಬಲ್ ಸ್ಟೇರಿಂಗ್ ಸರ್ಕಾರ ಬಂದಿದೆ, ಸಿಎಂ ಸೈಲೆಂಟ್, ಡಿಸಿಎಂ ವೈಲೆಂಟ್ ಆಗಿರುತ್ತಾರೆ ಎಂದು ಮಾಜಿ ಸಚಿವ  ಆರ್.ಅಶೋಕ್ ವ್ಯಂಗ್ಯವಾಡಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅಶೋಕ್,  ಪ್ರತಿ ಸಭೆಯಲ್ಲೂ ಸಿಎಂಗಿಂತಲೂ ಡಿಸಿಎಂ ಮೊದಲು ಮಾತನಾಡುತ್ತಾರೆ ಎಂದು ಟೀಕಿಸಿದರು.

ಪೊಲೀಸರು, ಹಿಂದೂ ಸಂಘಟನೆಗಳಿಗೆ ಡಿಸಿಎಂ ಧಮ್ಕಿ ಹಾಕುತ್ತಿದ್ದಾರೆ, ಇನ್ನೂ ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡಿಲ್ಲ. ಇದು ಜನರಿಗೆ ರಸಜ್ಯ ಸರ್ಕಾರ  ಮಾಡಿದ ಮೋಸ ಎಂದು ದೂರಿದರು.

ರಾಹುಲ್ ಗಾಂಧಿ,  ಪ್ರಿಯಾಂಕ ಗಾಂಧಿ ಬಂದು ಗ್ಯಾರಂಟಿ ಘೋಷಣೆ ಮಾಡಿದರು.

ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದಿದ್ದರು,ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಶೋಕ್ ‌ಕಿಡಿಕಾರಿದರು.