ಬೆಂಗಳೂರು: 2023 – 24 ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಸಿ ಇ ಟಿ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಚೇರಿಯಲ್ಲಿ ಗುರುವಾರ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಸಿಇಟಿ ಫಲಿತಾಂಶವನ್ನು ಪ್ರಕಟಿಸಿದರು.
ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ 2,0 3,381, ಕೃಷಿ ವಿಜ್ಞಾನ ಕೋರ್ಸ್ ನಲ್ಲಿ 1,64,187, ಪಶು ಸಂಗೋಪನೆ 1,66,746, ಯೋಗ ಮತ್ತು ನ್ಯಾಚುರೋಪತಿ-206,191, ಬಿ ಫಾರ್ಮ2,06191, ಡಿ ಫಾರ್ಮ 2,06340, ಬಿ ಎಸ್ ಸಿ ನರ್ಸಿಂಗ್ ಕೋರ್ಸ್ ನಲ್ಲಿ 1,66,808 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ.
ಯು ಜಿ ನೀಟ್ 2023ರ ಫಲಿತಾಂಶ ಬಂದ ನಂತರ ಅಂಕಗಳನ್ನು ಆದರಿಸಿ ಆನಂತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ, ಭಾರತೀಯ ವೈದ್ಯ ಪದ್ಧತಿ (ಆಯುರ್ವೇದ) ಹಾಗೂ ಹೋಮಿಯೋಪತಿ ಕೋರ್ಸ್ಗಳ ಸೀಟು ಹಂಚಿಕೆ ಪರಿಗಣಿಸಲಾಗುವುದು ಎಂದು ಸಚಿವರು ತಿಳಿಸಿದರು.
ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರು ಉತ್ತರಹಳ್ಳಿಯ ಕನಕಪುರ ರಸ್ತೆಯ ಮಲ್ಲಸಂದ್ರ ಗ್ರಾಮದ ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಂ ಕಾಲೇಜಿನ ವಿಜ್ಞೇಶ್ ಮೊದಲ ಸ್ಥಾನ ಪಡೆದಿದ್ದಾರೆ, ಜಯನಗರದ ಆರ್.ವಿ.ಪಿಯು ಕಾಲೇಜಿನ ಕೃಷ್ಣಸ್ವಾಮಿ ದ್ವಿತೀಯ, ಹುಬ್ಬಳ್ಳಿಯ ವಿದ್ಯಾನಿಕೇತನ ಪಿಯು ಕಾಲೇಜಿನ ಸಮೃದ್ ಶೆಟ್ಟಿ ಮೂರನೇ ಸ್ಥಾನ ಪಡೆದಿದ್ದಾರೆ.
ಬಳ್ಳಾರಿಯ ತೋರಣಗಲ್ ಜಿಂದಾಲ್ ವಿದ್ಯಾಮಂದಿರದ ಸುಮೇದ್ ನಾಲ್ಕನೇ ಸ್ಥಾನ ಬೆಂಗಳೂರಿನ ಮಾರತಹಳ್ಳಿಯ ಇ- ಟೆಕ್ನೋ ಕಾಲೇಜಿನ ಮಾಧವ್ ಸೂರ್ಯ ತಡಿಪಲ್ಲಿ 5ನೇ ಸ್ಥಾನ, ಜಯನಗರ ಆರ್‌ವಿಪಿಯು ಕಾಲೇಜಿನ ಸುಜಿತ್ ಅಡಿಗ 6ನೇ ಸ್ಥಾನ, ಶಂಕರನಗರದ ನಾರಾಯಣ ಒಲಂಪಿಯಾಡ್ ಶಾಲೆಯ ಉಜ್ವಲ್ ಎಲ್ ಶಂಕರ್ 7ನೇ ಸ್ಥಾನ ಬೆಂಗಳೂರಿನ ಅಲ್ಟಿನಿ ಪಬ್ಲಿಕ್ ಶಾಲೆಯ ರಿಷಿತ್ ಗುಪ್ತ 8ನೇ ಸ್ಥಾನ, ಕನಕಪುರ ರಸ್ತೆಯ ದೀಕ್ಷಾ ಪಿಯು ಕಾಲೇಜಿನ ಅಭಿನವ್ ಒಂಬತ್ತನೇ ಸ್ಥಾನ,ಇದೇ ಕಾಲೇಜಿನ ಭುವನ್ ಹತ್ತನೆ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
ನ್ಯಾಚಿರೋಪತಿ ಹಾಗೂ ಯೋಗ ಕೋರ್ಸ್ ನಲ್ಲಿ ಬೆಂಗಳೂರಿನ ಪದ್ಮನಾಭನಗರದ ಕುಮಾರನ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರತಿಕ್ಷ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಕೃಷಿ ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಯುನಿವರ್ಸಿಟಿ ಕಾಲೇಜು ವಿದ್ಯಾರ್ಥಿ ಬೈರೇಶ್ ಮೊದಲ ಸ್ಥಾನ ಪಡೆದಿದ್ದಾರೆ ಎಂದು ಸಚಿವರು ವಿವರಿಸಿದ್ದರು.