ನ್ಯೂಯಾರ್ಕ್: ಯೋಗ ದಿನಾಚರಣೆ ಅಂಗವಾಗಿ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆಯಿತು.
9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿ, ಯೋಗ ಅಂದರೆ ಏಕತೆ, ಮಾನವೀಯತೆ ಎಂದು ಹೇಳಿದರು.
ಯೋಗ ಎಂಬುದು ಕೇವಲ ವ್ಯಾಯಾಮವಲ್ಲ, ಜೀವನ ವಿಧಾನ ಎಂದು ಪ್ರಧಾನಿ ತಿಳಿಸಿದರು. ಯೋಗ ಶಕ್ತಿ ನಮ್ಮನ್ನು ಆರೋಗ್ಯವಾಗಿರಿಸುವುದಷ್ಟೇ ಅಲ್ಲ, ಸ್ವಸ್ಥವಾಗಿರಿಸುವುದಾಗಿದೆಂದರು ಮೋದಿ.
ಇಂದು ಯೋಗ ಜಾಗತಿಕವಾಗಿ ಪ್ರಖ್ಯಾತಿಯಾಗಿದೆ. ಯೋಗ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ ಎಂದರು.
ಯೋಗ ಅಂದರೆ ಒಗ್ಗಟ್ಟು. ಯೋಗದಿಂದಾಗಿ ನಾವೆಲ್ಲ ಇಲ್ಲಿ ಒಂದುಗೂಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ಐತಿಹಾಸಿಕ ಯೋಗ ದಿನಾಚರಣೆಯಲ್ಲಿ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳು, ವಿಶ್ವದ 180 ದೇಶದ ರಾಯಭಾರಿಗಳು ಭಾಗವಹಿಸಿದ್ದರು.

