ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದ‌ ಸಂಭ್ರಮ

ಮೈಸೂರು:  ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆ ಮಾಡಿದ್ದು,ಶಕ್ತಿ ದೇವತೆ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.

ಮುಂಜಾನೆ 3 ಗಂಟೆಯಿಂದಲೇ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಮೂದಲ ಶುಕ್ರವಾರ ಪ್ರಯುಕ್ತ ದೇವಿ ಲಕ್ಷ್ಮೀ ಅಲಾಂಕರದಲ್ಲಿ ಕಂಗೊಳಿಸುತ್ತಿದ್ದಾಳೆ.

ಪೂಜೆ ನಂತರ ಮುಂಜಾನೆ 5.30 ರಿಂದ ಭಕ್ತರಿಗೆ ತಾಯಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಚಾಮುಂಡೇಶ್ವರಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು.

ಈ ಭಾರಿ ಪಾಸ್ ವ್ಯವಸ್ಥೆಗೆ ಬ್ರೇಕ್ ಹಾಕಿರುವುದು ವಿಶೇಷ.

300ರೂ ಹಾಗೂ 50ರೂ ಟಿಕೆಟ್ ಪಡೆದು ವಿಶೇಷ ದರ್ಶನಕ್ಕೆ ಅವಕಾಶ‌ ಕಲ್ಪಿಸಲಾಗಿದೆ.

65 ವರ್ಷ ಮೇಲ್ಪಟ್ಟವರಿಗೆ 50ರೂ ಟಿಕೆಟ್ ಲೈನ್ ನಲ್ಲಿ ನೇರ ದರ್ಶನಕ್ಕೆ ವ್ಯವಸ್ಥೆ ಮಾಡಿರುವುದೂ ಕೂಡಾ‌ ವಿಶೇಷವೇ ಆಗಿದೆ.

ಭಕ್ತರು ಬೆಳಗ್ಗೆ 5.30 ರಿಂದ ರಾತ್ರಿ 12 ಗಂಟೆಯವರೆಗೆ ದೇವಿ ದರ್ಶನ ಪಡೆಯಬಹುದಾಗಿದೆ.

ಈ‌ ಬಾರಿ ‌ಭಕ್ತರಿಗೆ ಬಿಸಿಲು ಮಳೆಯಿಂದ ತೊಂದರೆಯಾಗದಂತೆ ಬೃಹತ್ ‌ಪೆಂಡಾಲ್ ಹಾಕಲಾಗಿದೆ.

ಬೆಳಗಿನಿಂದಲೇ ಭಕ್ತರಿಗೆ‌ ತಿಂಡಿ‌ ಹಾಗೂ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಈ‌‌‌‌ ಬಾರಿ ಯಾವುದೇ ಅಡಚಣೆಯಾಗದಂತೆ ಎಲ್ಲಾ‌ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೇನೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರು.