ಬೆಂಗಳೂರು: ತಮ್ಮ ವಿರುದ್ದ ವಂಚನೆ ಆರೋಪ ಮಾಡಿದ ಇಬ್ಬರು ನಿರ್ಮಾಪಕರಿಗೆ ಬೇಷರತ್ ಕ್ಷಮೆ ಯಾಚಿಸುವಂತೆ ನಟ ಕಿಚ್ಚ ಸುದೀಪ್ ಲೀಗಲ್ ನೋಟಿಸ್ ನೀಡಿದ್ದಾರೆ.
ನಿರ್ಮಾಪಕರಾದ ಎಂ.ಎನ್ ಕುಮಾರ್, ಎಂ.ಎನ್ ಸುರೇಶ್ ಅವರುಗಳಿಗೆ ಸುದೀಪ್ ಅವರು ಹಿರಿಯ ವಕೀಲ ಸಿ.ವಿ ನಾಗೇಶ್ ಮೂಲಕ ನೋಟಿಸ್ ನೀಡಿದ್ದಾರೆ.
ಹಣ ಪಡೆದು ಕಾಲ್ ಶೀಟ್ ಕೊಡುತ್ತಿಲ್ಲ ಎಂದು ಇಬ್ಬರು ನಿರ್ಮಾಪಕರು ಇತ್ತೀಚೆಗೆ ಸುದೀಪ್ ವಿರುದ್ಧ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ಲೀಗಲ್ ನೋಟಿಸ್ ನೀಡಿರುವ ಸುದೀಪ್, ಸುಳ್ಳು ಹೇಳಿ ನನ್ನ ತೇಜೋವಧೆ ಮಾಡಿದ್ದೀರಿ, ನನ್ನ ಮೇಲಿನ ಎಲ್ಲಾ ಆರೋಪಗಳನ್ನು ಸಾಬೀತು ಪಡಿಸಿ. ಇಲ್ಲವಾದರೆ ಬೇಷರತ್ ಕ್ಷಮೆಯಾಚಿಸಿ ಎಂದು ಸೂಚಿಸಿದ್ದಾರೆ.
ಜೊತೆಗೆ 10 ಕೋಟಿ ರೂ. ಮಾನನಷ್ಟ ದಂಡ ಕಟ್ಟುವಂತೆ ನೋಟಿಸ್ ನಲ್ಲಿ ಉಲ್ಲೇಖ ಮಾಡಿದ್ದಾರೆ.

