ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಜಿಯವರ ಕೇಂದ್ರ ಸರ್ಕಾರ 9 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಅವರು ಮಾಡಿದ ಕಾರ್ಯಕ್ರಮಗಳು, ಸಾಧನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.
ಧಾರವಾಡ ಲೋಕಸಭಾ ಕ್ಷೇತ್ರ ಮಹಾ ಸಂಪರ್ಕ ಅಭಿಯಾನದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಹಾಗೂ ಹಿರಿಯರ
ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಯೋಜನೆಗಳು ಎಲ್ಲರಿಗೂ ತಿಳಿಯುವಂತಾಗಬೇಕೆಂದು ಸೂಚಿಸಿದರು.
ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ ಅಧ್ಯಕ್ಷತೆ ವಹಿಸಿದ್ದರು
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ನೂತನ ಮಹಾಪೌರರಾದ ವೀಣಾ ಭಾರದ್ವಾಡ ಅವರನ್ನು ಸನ್ಮಾನಿಸಲಾಯಿತು
ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಧಾರವಾಡ ಲೋಕಸಭಾ ಚುನಾವಣೆ ಉಸ್ತುವಾರಿ ಷಣ್ಮುಖ ಗುರಿಕಾರ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಹಿರಿಯರಾದ ಜಿ ಎಂ ಚಿಕ್ಕಮಠ, ಜನಸಂಘದ ಹಿರಿಯರಾದ ಗುರಯ್ಯ ಸಾಲಿಮಠ, ಚಂದ್ರಶೇಖರ ಗೋಕಾಕ, ಸತೀಶ್ ಶೇಜವಾಡಕರ, ಡಾ. ಕ್ರಾಂತಿ ಕಿರಣ, ಬಸವರಾಜ ಅಮ್ಮಿನಭಾವಿ, ಜಗದೀಶ ಬುಳ್ಳಾನವರ, ವಿನಯ ಸಜ್ಜನರ ರಾಜು ಜರತಾರಘರ, ಶಿವಾನಂದ ಮುತ್ತಣ್ಣವರ, ನೀಲಕಂಠ ತಡಸದಮಠ, ಯಮನೂರ ಜಾಧವ, ಬಸವರಾಜ ಧಾರವಾಡ, ಚಿಕ್ಕಪ್ಪ ತಡಸ, ಬಸವರಾಜ ಚಿಕ್ಕಮಠ, ರಾಜು ಕೊರ್ಯಣಮಠ, ಶುಭಸ್ ಅಥಣಿ, ಡಾ. ರವೀಂದ್ರ ವೈ, ಲಕ್ಷ್ಮೀಕಾಂತ ಘೋಡಕೆ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

