ಹೆಚ್.ಡಿಕೆಗೆ ಕೆ.ಸಿ ವೇಣುಗೋಪಾಲ್ ಟಾಂಗ್

ಬೆಂಗಳೂರು: ಸೆಕ್ಯುಲರಿಸಂ ಮೇಲೆ ನಂಬಿಕೆ ಇರುವ ಹಾಗೂ ಸರ್ವಾಧಿಕಾರ ವಿರೋಧಿಸುವ ಯಾವುದೇ ಪಕ್ಷವನ್ನು ನಾವು ಸ್ವಾಗತಿಸುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ.ವೇಣುಗೋಪಾಲ್ ಹೇಳಿದರು.

ಬೆಂಗಳೂರಲ್ಲಿ ಸೋಮವಾರ ವಿವಿಧ ಪಕ್ಷಗಳ ಸಭೆಯಲ್ಲಿ ಭಾಗವಿಸಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೆಲ ಪ್ರಾದೇಶಿಕ ಪಕ್ಷಗಳು ಕಳೆದ ಚುನಾವಣೆಯಲ್ಲಿ ತಮ್ಮ ನಿಲುವು ಏನು ಎಂಬುದನ್ನು ಸಾಬೀತು ಮಾಡಿವೆ.

ಸರ್ವಾಧಿಕಾರಿ ಧೋರಣೆ ವಿರೋಧಿಸುವ ಯಾರು ಬೇಕಾದರೂ ನಮಗೆ ಕೈ ಜೋಡಿಸಬಹುದು. ಪ್ರತ್ಯೇಕವಾಗಿ ಆಹ್ವಾನ ನೀಡುವ ಅಗತ್ಯತೆ ಇಲ್ಲ ಎಂದು ಪರೋಕ್ಷವಾಗಿ ‌ಎಚ್ ಡಿ ಕೆ‌ ಅವರಿಗೆ ಟಾಂಗ್ ನೀಡಿದರು.

ಮಹಾಮೈತ್ರಿಕೂಟ ಸಭೆಗೆ ಜೆಡಿಎಸ್ ಗೆ ಆಹ್ವಾನ‌ ನೀಡುವುರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಜೆಡಿಎಸ್ ಗೆ ಪ್ರತ್ಯೇಕ ಆಹ್ವಾನ ನೀಡುವ ಅಗತ್ಯತೆ ಇಲ್ಲ ಎಂದರು.

ಜುಲೈ 18ರ ಬೆಳಗ್ಗೆ 11 ಗಂಟೆಗೆ ವಿಪಕ್ಷಗಳ ಎರಡನೇ ಸಭೆ ಆರಂಭವಾಗಲಿದೆ. ಸಭೆಯಲ್ಲಿ 26 ಪಕ್ಷಗಳ ನಾಯಕರು ಪಾಲ್ಗೊಳ್ಳುತ್ತಾರೆ. ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಔತಣಕೂಟ ಏರ್ಪಡಿಸಿದ್ದಾರೆ.

ಎಲ್ಲ ಪಕ್ಷಗಳು ಒಂದೇ ಸಾಮಾನ್ಯ ವಿಷಯಕ್ಕಾಗಿ ಸೇರುತ್ತಿದ್ದೇವೆ ಎಂದು ಹೇಳಿದರು.

ಗೇಮ್ ಚೇಂಜರ್ ಸಭೆ ಆಗುತ್ತೆಂಬ ವಿಶ್ವಾಸವಿದೆ. ಇದೇ ನಮ್ಮ ಮೊದಲ ಅಸಲಿ ಜಯ ಎಂದು ಭಾವಿಸುತ್ತೇನೆ.

ಸಂಸತ್ ಅಧಿವೇಶನ 20 ರ ನಂತರ ಪ್ರಾರಂಭವಾಗುತ್ತದೆ. ಪಾರ್ಲಿಮೆಂಟ್ ಸ್ಟ್ಯಾಟರ್ಜಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಕೆ.ಸಿ ವೇಣುಗೋಪಾಲ್ ತಿಳಿಸಿದರು.