ನವದೆಹಲಿ: ಶ್ರೀಕೃಷ್ಣನಿಗಾಗಿ ಹೇಳುವ ಘೋಷಣೆಗಳು ಸನಾತನ ಧರ್ಮಕ್ಕೆ ಸವಾಲೆಸೆಯುವವರನ್ನು ತಟ್ಟುವಷ್ಟು ಜೋರಿರಬೇಕು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕರೆನೀಡಿದರು.
ದ್ವಾರಕಾದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವೆ, ಸನಾತನ ಧರ್ಮಕ್ಕೆ ಸವಾಲೆಸೆದವರಿಗೆ ನಮ್ಮ ಧ್ವನಿ ತಲುಪಬೇಕು
ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಗೆ ಪರೋಕ್ಷವಾಗಿ ಚಾಟಿ ಬೀಸಿದರು.
ಸನಾತನ ಧರ್ಮಕ್ಕೆ ಸವಾಲೆಸೆದವರಿಗೆ ನಮ್ಮ ಧ್ವನಿ ತಲುಪಬೇಕು ಆಗ
ಭಕ್ತರು ಬದುಕಿರುವವರೆಗೂ ನಮ್ಮ ಧರ್ಮ ಮತ್ತು ನಂಬಿಕೆಗೆ ಯಾರೂ ಸವಾಲು ಹಾಕಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

