ಉದ್ಯಮಿಗೆ ಟಿಕೆಟ್ ಕೊಡಿಸುವ ನೆಪದಲ್ಲಿ ವಂಚನೆ: ಹಾಲಶ್ರೀ ಬಂಧನ

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯಿಂದ 5 ಕೋಟಿ ಪಡೆದ ಮತ್ತೊಬ್ಬ ಅದರಲ್ಲೂ‌ ಪ್ರಮುಖ ಆರೋಪಿ ಹಾಲಶ್ರೀ ಸ್ವಾಮಿಯನ್ನು ಕಡೆಗೂ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಈ ಪ್ರಕರಣದ ಚೈತ್ರಾ ಕುಂದಾಪುರ ಮತ್ತು ಸ್ನೇಹಿತನನ್ನು ಈಗಾಗಲೇ ಬಂಧಿಸಲಾಗಿದ್ದು ಹಾಲಶ್ರೀ ತಲೆಮರೆಸಿಕೊಂಡಿದ್ದರು.

3ನೇ ಆರೋಪಿ ಹಾಲಶ್ರೀಯನ್ನ ಸಿಸಿಬಿ ಪೊಲೀಸರು ಒಡಿಶಾದ ಕಟಕ್ ನಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ‌ ಬಂಧಿಸಿದ್ದಾರೆ.

ಭುವನೇಶ್ವರದಿಂದ ಬೋಧ್ ಗಯಾಗೆ ತೆರಳುತ್ತಿದ್ದ ವೇಳೆ ಒಡಿಶಾ ಪೊಲೀಸರ ಸಹಾಯದಿಂದ ಹಾಲಶ್ರೀ ಯನ್ನು ಬಂಧಿಸಲಾಗಿದೆ.

ರಾತ್ರಿ ವೇಳೆಗೆ ಹಾಲಶ್ರೀಯನ್ನ ಪೊಲೀಸರು ಬೆಂಗಳೂರಿಗೆ ಕರೆತರಲಿದ್ದಾರೆ.