ಡಾ.ಯತೀಂದ್ರರಿಗೆ ಅಹವಾಲುಗಳ ಸುರಿಮಳೆ:ಬೇಸರಿಸದೆ ಸ್ಪಂದಿಸಿದ ಮಾಜಿ ಶಾಸಕ

ಮೈಸೂರು: ಡಾ.ಯತೀಂದ್ರ ಸಿದ್ದರಾಮಯ್ಯ ಮಾಜಿ ಶಾಸಕರಾದರೂ ಮುಖ್ಯ ಮಂತ್ರಿ ಮಗಾ ಅಂತಾನೋ ಅಥವಾ‌ ಶಾಸಕರಾಗಿದ್ದಾಗ ಮಾಡಿರುವ ಕೆಲಸಗಳ ವರ್ಚಸ್ಸೋ ಅಂತೂ ಅವರು ಹೋದೆಡೆಯಲ್ಲಾ ಜನ ತುಂಬಿಕೊಂಡು ಸಮಸ್ಯೆ ತೋಡಿಕೊಳ್ಳುತ್ತಾರೆ.

ಡಾ.ಯತೀಂದ್ರ ಹೋದಡೆಯೆಲ್ಲಾ ಭಾರಿ ಪ್ರತಿಕ್ರಿಯೆ ದೊರೆಯುತ್ತಿದೆ, ಅಹವಾಲುಗಳ ಮಾಹಾಪೂರವೇ ಹರಿದು ಬರುತ್ತದೆ.

ನಂಜನಗೂಡಿನಲ್ಲಿ ವಿಶೇಷಚೇತನರಿಗೆ ತ್ರಿಚಕ್ರವಾಹನ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಶಾಸಕ ದರ್ಶನ್ ದೃವನಾರಾಯಣ್ ಕಚೇರಿಗೆ ಭೇಟಿ ಕೊಟ್ಟರು.

ಆಗ ಸ್ಥಳೀಯರು ಅಹವಾಲುಗಳನ್ನ ಸಲ್ಲಿಸಲು ನಾ ಮುಂದು,ತಾಮುಂದು ಎಂದು ಮುಗಿಬಿದ್ದರು.

ಆದರೆ ಸ್ವಲ್ಪಾನೂ ಬೇಸರಿಸಿಕೊಳ್ಳದೆ ಡಾ.ಯತೀಂದ್ರ ಅವರು ಅರ್ಜಿಗಳಿಗೆ ಸಹಿ ಹಾಕುತ್ತಾ ತಮ್ಮ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿದ್ದು ವಿಶೇಷ.