ಡ್ರಗ್ಸ್ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖಯರಾ ಬಂಧನ

ಚಂಡೀಗಢ: ಡ್ರಗ್ಸ್ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಸುಖಪಾಲ್ ಸಿಂಗ್ ಖಯರಾ ಅರನ್ನು ಬಂಧಿಸಲಾಗಿದೆ.

2015ರ ಡ್ರಗ್ಸ್ ಪ್ರಕರಣವೊಂದರ ಸಂಬಂಧ ಸುಖಪಾಲ್ ಅವರನ್ನು ಜಲಾಲಬಾದ್ ಪೊಲೀಸರು ಗುರುವಾರ ಬೆಳಗ್ಗೆ
ಚಂಡೀಗಢದಲ್ಲಿರುವ ನಿವಾಸದಲ್ಲಿ ಬಂಧನಿಸಲಾಗಿದೆ.

ಬಂಧನಕ್ಕೂ ಮೊದಲು ಸುಖಪಾಲ್ ಅವರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಹಾಗೆಯೇ ಬಂಧನದ ಘಟನೆಯನ್ನು ಫೇಸ್‍ಬುಕ್ ಲೈವ್ ಮೂಲಕ ಜನರಿಗೂ ತೋರಿಸುವ ಮೂಲಕ ಹೈಡ್ರಾಮವೇ ನಡೆಸಿದರು

ಸುಖಪಾಲ್ ಸಿಂಗ್ ಖೈರಾ ಅವರನ್ನು 2021ರಲ್ಲೂ ಬಂಧನಕ್ಕೊಳಪಡಿಸಲಾಗಿತ್ತು.

ಅಕ್ರಮವಾಗಿ ಮಾದಕವಸ್ತು ಸಾಗಣೆ, ಮಾದಕವಸ್ತು ದಂಧೆ, ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಸುಖಪಾಲ್ ಸಿಂಗ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.