ಮೈಸೂರು: ಮೈಸೂರಿನವರಿಗೆ ದಸರಾ, ನವರಾತ್ರಿ, ಚಾಮುಂಡಿ ತಾಯಿ, ಆಕೆಯ ಮಹಿಮೆ,ಆಷಾಢ ಶುಕ್ರವಾರ ವರ್ಧಂತಿ ತೆಪ್ಪೋತ್ಸವ ಗೊತ್ತು ಆದರೆ ಈ ಸಂಭ್ರಮದ ನಡುವೆ 2015 -2016ರಲ್ಲಿ ಅಸಹ್ಯ, ಅಪದ್ದ, ಮಹಿಷ ದಸರಾ ಹುಟ್ಟು ಹಾಕಲಾಯಿತು ಈ ಬಾರಿ ಇದನ್ನು ತಡೆಯುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ದೆವ್ವ ಯಾವಾಗ ದೇವರಾಯಿತು ಗೊತ್ತಿಲ್ಲ
ಅಂದು ದೇವರನ್ನು ದೆವ್ವ ಮಾಡುವ ದೆವ್ವವನ್ನು ದೇವರು ಮಾಡುವ ಕೆಲಸ
2017, 2018ರಲ್ಲೂ ಮುಂದುವರಿಯಿತು
ಯಡಿಯೂರಪ್ಪ ಸಿಎಂ ಆದ ಮೇಲೆ ಇದಕ್ಕೆ ಬ್ರೇಕ್ ಹಾಕಲಾಯಿತು ಎಂದು ತಿಳಿಸಿದರು.
ಆಸ್ತಿಕರು ನಂಬಿಕೆ ಇಟ್ಟವರಿಗೆ ನೋವಾಗುತ್ತದೆ ಆ ಕಾರಣಕ್ಕಾಗಿ ಮಹಿಷ ದಸರಾಗೆ ಬ್ರೇಕ್ ತಡೆಯಲಾಯಿತು,
2019, 2020, 2021, 2022 ನಾಲ್ಕು ವರ್ಷ ಮಹಿಷ ದಸರಾವನ್ನು ತಡೆದಿದ್ದೇವೆ
ಶ್ರದ್ದೆಯಿಂದ ಚಾಮುಂಡಿ ಪೂಜೆ ನಡೆಯುತ್ತಿದೆ ಎಂದು ತಿಳಿಸಿದರು.
ಈಗ ಪುನಃ ಸಿದ್ದರಾಮಯ್ಯ ಸಿಎಂ ಆಗಿ ಬಂದಿದ್ದಾರೆ,ಮತ್ತೆ ಮಹಿಷ ದಸರಾ ಮಾಡುವವರು ತಲೆ ಎತ್ತಿದ್ದಾರೆ ಹಾಗಾಗಿ
ಇದನ್ನು ತಡೆಯಲು ಅಕ್ಟೋಬರ್ 13ಕ್ಕೆ ಚಲೋ ಚಾಮುಂಡಿ ಬೆಟ್ಟ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಪ್ರತಾಪ್ ಸಿಂಹ ಹೇಳಿದರು.
ಮಹಿಷ ದಸರಾ ದಿನವೇ ಚಲೋ ಚಾಮುಂಡಿ ಬೆಟ್ಟ ಜಾಥಾ ನಡೆಯಲಿದೆ,
ಭಕ್ತರ ಭಾವನೆಗೆ ನೋವಾಗಬಾರದು ಅನ್ನೋ ಕಾರಣಕ್ಕೆ ಜಾಥಾ ಮಾಡುತ್ತಿದ್ದೇವೆ ಇದರಲ್ಲಿ
ಕನಿಷ್ಠ 5 ಸಾವಿರ ಜನರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಮಹಿಷಾಸುರ ಬಳಿ ಅನಾಚಾರ ತಡೆದು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ,
ಈ ಬಗ್ಗೆ ಡಿ ಸಿ, ಪೊಲೀಸ್ ಕಮಿಷನರ್ ಅವರಿಗೆ ಮಾಹಿತಿ ನೀಡಿದ್ದೇವೆ ಎಂದು ಸಂಸದರು ತಿಳಿಸಿದರು.
ಇದು ಬಿಜೆಪಿ ಕಾರ್ಯಕ್ರಮವಲ್ಲ ಇದು ಎಲ್ಲರೂ ಸೇರು ಮಾಡುತ್ತಿರುವ ಜಾಥಾ
ಎಲ್ಲರೂ ಜಾಥದಲ್ಲಿ ಭಾಗವಹಿಸಲು ಸಂಸದ ಪ್ರತಾಪಸಿಂಹ ಮನವಿ ಮಾಡಿದರು.
ಅದಕ್ಕೆ ಸಂಘಟಿತ ಹೋರಾಟಕ್ಕೆ ಕರೆ ಕೊಡುತ್ತಿದ್ದೇನೆ, ಬೆಟ್ಟದ ಮೆಟ್ಟಿಲು ಹಾಗೂ ರಸ್ತೆ ಮೂಲಕ ಚಾಮುಂಡಿ ಬೆಟ್ಟ ಚಲೋ
ಇದ್ದು,ಇದು ಪಕ್ಷಾತೀತಾವಾಗಿ ಧರ್ಮಾತೀತವಾದ ಚಳವಳಿ ಎಂದು ತಿಳಿಸಿದರು.
ಮೈಸೂರಿನ 11 ಶಾಸಕರು ಎಂ.ಎಲ್.ಸಿಗಳಿಗೂ ಜಾಥಾಗೆ ಆಹ್ವಾನ ನೀಡಿದ್ದೇವೆ,ತನ್ವೀರ್ ಸೇಠ್ ಸಹಾ ಚಾಮುಂಡಿ ಭಕ್ತರು ಅವರು ದಸರಾ ಕಾರ್ಯಕ್ರಮಕ್ಕೂ ಬರುತ್ತಾರೆ ದೇವಸ್ಥಾನಕ್ಕೂ ಬರುತ್ತಾರೆ ಪುಷ್ಪಾರ್ಚನೆ ಮಾಡುತ್ತಾರೆ
ಹೀಗಾಗಿ ಇದು ಧರ್ಮಾತೀತ ಜಾಥ ಎಂದು ಪ್ರತಾಪ್ ಸಿಂಹ ತಿಳಿಸಿದರು.

