ಮಹಿಷ ದಸರಾ ಆಚರಣೆ ವಿರುದ್ದ ಸಂಸದ ಪ್ರತಾಪ್ ಸಿಂಹ ಆಕ್ರೋಶ

ಮೈಸೂರು: ಮಹಿಷ ದಸರಾ ಆಚರಣೆ ವಿರುದ್ದ ಸಂಸದ ಪ್ರತಾಪ್ ಸಿಂಹ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಫೇಸ್ಬುಕ್ ನಲ್ಲಿ ಲೈವ್ ನಲ್ಲಿ ಪ್ರತಾಪ್ ಸಿಂಹ ಮಾತನಾಡಿ ಕಿಡಿ ಕಾರಿದ್ದಾರೆ.

ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಹಿಷ ದಸರಾ, ಚಾಮುಂಡಿ ಬೆಟ್ಟ ಚಲೋ ಎರಡಕ್ಕೂ ಅನುಮತಿ ಕೊಟ್ಟಿಲ್ಲ ಅವರ ನಿರ್ಧಾರವನ್ನ ಸ್ವಾಗತ ಮಾಡುತ್ತೇವೆ ಎಂದು ತಿಳಿಸಿದರು

ನಮ್ಮ ಉದ್ದೇಶ ಮಹಿಷ ದಸರಾ ಎಂಬ ಅಸಹ್ಯ, ಅನಾಚಾರವನ್ನ ತಡೆಯುವುದಷ್ಟೇ. ನಮ್ಮ ಸರ್ಕಾರವಿದ್ದಾಗ ಮಹಿಷ ದಸರಾ ಮಾಡಲಿಕ್ಕೆ ಬಿಟ್ಟಿರಲಿಲ್ಲ.

ಒಂದು ವೇಳೆ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಅನುಮತಿ ಕೊಟ್ಟರೆ ಅ.15ರಂದು ನಡೆಯಲಿರುವ ದಸರಾ ಉದ್ಘಾಟನೆ ವೇಳೆ ನಾನು ಇದನ್ನ ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದರು.

ಮಹಿಷ ಎಂಬ ದೆವ್ವವನ್ನ ದೇವರು ಮಾಡಲು ಹೊರಟಿದ್ದಾರೆ. ಮಹಿಷ ಬೌದ್ಧ ಬಿಕ್ಕು ಅನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ.
ಮಹಿಷನನ್ನ ದೇವರು ಮಾಡಿ ಚಾಮುಂಡಿ ತಾಯಿಯನ್ನ ಅವಮಾನಿಸುವುದು ಇವರ ಕೆಲಸ ಎಂದು ಪ್ರತಾಪ್ ಸಿಂಹ ಟೀಕಿಸಿದ್ದಾರೆ.