ಕೇರಳದ ಕಲಮಶ್ಶೇರಿಯಲ್ಲಿ‌ ಬಾಂಬ್ ಸ್ಫೋಟ: ಒಬ್ಬ ದುರ್ಮರಣ

ತಿರುವನಂತಪುರಂ: ಕೇರಳದ ಎರ್ನಾಕುಲಂನ ಕಲಮಶ್ಶೇರಿಯಲ್ಲಿ‌ ಬಾಂಬ್ ಸ್ಫೋಟಗೊಂಡು ಒಬ್ಬ ದುರ್ಮರಣಕ್ಕೀಡಾಗಿದ್ದಾರೆ.

ಮೂರು ಪ್ರಬಲ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಐಸಿಯುನಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ.
ಕಲಮಶ್ಶೇರಿಯಲ್ಲಿ‌ ಭಾನುವಾರ ಪ್ರಾರ್ಥನೆ ಗಾಗಿ ಸುಮಾರು 2,500 ಮಂದಿ ಸೇರಿದ್ದರು. ಇದೇ ವೇಳೆ ಪ್ರಾರ್ಥನೆ ನಡೆಯುತ್ತಿದ್ದ ಹಾಲ್ ನಲ್ಲಿ ಭಾರೀ ಸ್ಪೋಟ ಸಂಭವಿಸಿದೆ.

ಸ್ಪೋಟದ ಸದ್ದಿಗೆ ಗಾಬರಿಗೊಂಡು ಜನ ದಿಕ್ಕಾಪಾಲಾಗಿ ಓಡತೊಡಗಿದರು.

ಪ್ರಾರ್ಥನಾ ಮಂದಿರವನ್ನೇ ಗುರಿಯಾಗಿಸಿಕೊಂಡು ಸ್ಫೋಟಿಸಲಾಗಿದ್ದು,ಇದರ ಹಿಂದೆ ಭಯೋತ್ಪಾದಕ ಕೃತ್ಯ ಇರಬಹುದೆಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.

ಘಟನೆ ಸಂಬಂಧ ಕೇರಳ ಮುಖ್ಯಮಂತ್ರಿ ಪ್ರತಿಕ್ರಿಯಿಸಿ, ಕಲಮಶ್ಯೆರಿಯಲ್ಲಿ ಸಂಭವಿಸಿದ ಸ್ಫೋಟ ದುರದೃಷ್ಟಕರ. ಸ್ಫೋಟದ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ. ಎಲ್ಲ ಅಂಶಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.

ಘಟನೆ ಸಂಬಂಧ ಒಬ್ಬನನ್ನು ರೈಲ್ವೆ ನಿಲ್ದಾಣ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.