ಬೆಂಗಳೂರು: ಪ್ರವಾಸ, ತೀರ್ಥಯಾತ್ರೆಗೆ ಹೋದಾಗ, ಅಲ್ಲಿನ ಸ್ಥಳೀಯ ಕಲಾವಿದರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 106 ನೇ ಸಂಚಿಕೆಯನ್ನುದ್ದೇಶಿಸಿ ಮೋದಿ ಮಾತನಾಡಿ ಸ್ಥಳೀಯರ ಉತ್ಪನ್ನಗಳನ್ನು ಖರೀದಿ ಮಾಡುವಂತೆ ಜನತೆಗೆ ಸಲಹೆ ನೀಡಿದರು.
ಪ್ರತಿ ಬಾರಿಯೂ ನಮ್ಮ ಹಬ್ಬಗಳು ಬಂದಾಗ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದು ನಮ್ಮ ಆದ್ಯತೆಯಾಗಿರಬೇಕು. ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಿ ಎಂದು ಪ್ರಧಾನಿ ತಿಳಿಸಿದರು.
ಅಕ್ಟೋಬರ್ 31 ರಂದು ಗುಜರಾತ್‌ನ ಏಕತಾ ಪ್ರತಿಮೆಯಲ್ಲಿ ಏಕತಾ ದಿನಾಚರಣೆಗೆ ಸಂಬಂಧಿಸಿದ ಪ್ರಮುಖ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿ ದೆಹಲಿಯಲ್ಲಿ ಕರ್ತವ್ಯದ ಹಾದಿಯಲ್ಲಿ ಬಹಳ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಅಕ್ಟೋಬರ್ 31 ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯ ದಿನವೂ ಆಗಿದೆ. ನಾನು ಅವರಿಗೆ ನನ್ನ ಹೃತ್ಪೂರ್ವಕ ಗೌರವವನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.

