ಚಿತ್ರದುರ್ಗ: ಅಂತೂ ಇಂತೂ ಮುರುಘಾ ಶ್ರೀಗಳಿಗೆ ಬಿಡುಗಡೆಯ ಭಾಗ್ಯ ಸಿಕ್ಕಿದೆ.
ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಮುರುಘಾ ಶ್ರೀಗಳನ್ನು ಚಿತ್ರದುರ್ಗ ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಇದ್ದುದರಿಂದ ಶ್ರೀಗಳು ಜೈಲು ಪಾಲಾಗಿದ್ದರು.
ಜಾಮೀನು ಕೋರಿ ತಮ್ಮ ವಕೀಲರ ಮೂಲಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಷರತ್ತುಬದ್ದ ಜಾಮೀನು ನೀಡಲಾಗಿದ್ದು,ವಿಷಯ ತಿಳಿಯುತ್ತಿದ್ದಂತೆ ಶ್ರೀಗಳನ್ನು ಭೇಟಿಯಾಗಲು ಸಾಕಷ್ಟು ಮಂದಿ ಭಕ್ತರು ಜಿಲ್ಲಾ ಕಾರಾಗೃಹ ಬಳಿ ಜಮಾಯಿಸಿದ್ದರು.
ಷರತ್ತುಗಳ ಪ್ರಕಾರ ಮುರುಘಾ ಶ್ರೀಗಳು ಚಿತ್ರದುರ್ಗದ ಮುರುಘಾ ಮಠ ಪ್ರವೇಶಿಸುವಂತಿಲ್ಲ, ಹಾಗಾಗಿ ಎಲ್ಲಿಗೆ ತೆರಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

