ಹರಿಪ್ರಸಾದ್‌ ಹೇಳಿಕೆಗೆ ನೋಟಿಸ್ ಕೊಡುವುದಿಲ್ಲ-ಪರಮೇಶ್ವರ್

ಬೆಂಗಳೂರು: ರಾಮಮಂದಿರ ಉದ್ಘಾಟನೆ ವೇಳೆ ಗೋಧ್ರಾ ಹತ್ಯಾಕಾಂಡದ ರೀತಿ ಮಾಡುವ ಸಾಧ್ಯತೆ ಇದೆ ಎಂಬ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್‌ ಹೇಳಿಕೆಗೆ ಯಾವುದೇ ನೋಟಿಸ್ ಕೊಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ‌ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹರಿಪ್ರಸಾದ್‌ ಹೇಳಿಕೆ ಬಗ್ಗೆ ಗೃಹ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

ಒಂದು ವೇಳೆ ಅಂತಹ ಮಾಹಿತಿ ಬಂದರೆ, ಅದನ್ನ ಹ್ಯಾಂಡಲ್ ಮಾಡೋಕೆ ನಮ್ಮ ಇಲಾಖೆ ಸಮರ್ಥವಾಗಿದೆ. ಅಂತಹ ಘಟನೆಗಳು ಆಗೋಕೆ ನಾವು ಬಿಡುವುದಿಲ್ಲ, ಸಂದರ್ಭ ಬಂದರೆ ಹರಿಪ್ರಸಾದ್‌ ಅವರನ್ನ ಕರೆದು ಕೇಳೋಣ ಎಂದು ಪರಮೇಶ್ವರ್ ಹೇಳಿದರು.