ಪರಿದೃಶ್ಯ 4ನೇ ಆವೃತ್ತಿ ಚಿತ್ರೋತ್ಸವ: ಕಿರುಚಿತ್ರ, ಸಾಕ್ಷ ಚಿತ್ರಗಳಿಗೆ ಆಹ್ವಾನ

ಮೈಸೂರು: ಮೈಸೂರು ಸಿನಿಮಾ ಸೊಸೈಟಿಯ ಪ್ರಮುಖ ಚಿತ್ರೋತ್ಸವವಾದ ಪರಿದೃಶ್ಯ ನಾಲ್ಕನೇ ಆವೃತ್ತಿಯನ್ನು  6/02/2026 ರಿಂದ 8/02/2026 ವರೆಗೆ ವಿದ್ಯಾರ್ಥಿ ಮತ್ತು ವೃತ್ತಿಪರ ವಿಭಾಗಗಳಲ್ಲಿ ಆಯೋಜಿಸಲಾಗಿದೆ.

ಪರಿದೃಶ್ಯ ನಾಲ್ಕನೇ ಆವೃತ್ತಿಯ ಚಿತ್ರೋತ್ಸವಕ್ಕೆ ಕಿರುಚಿತ್ರ ಮತ್ತು ಸಾಕ್ಷ ಚಿತ್ರಗಳನ್ನು ಆಹ್ವಾನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮೈನೂರು ಸಿನಿಮಾ ಸೊಸೈಟಿ ಅಧ್ಯಕ್ಷ ಚೇತನ್ ಎಂ ತಿಳಿಸಿದರು‌

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಚಿತ್ರಗಳು 1/1/2024ರ ನಂತರ ಚಿತ್ರೀಕರಣಗೊಂಡಿರಬೇಕು.

ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಕಿರುಚಿತ್ರ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಛಾಯಾಚಿತ್ರ, ಅತ್ಯುತ್ತಮ ಚಿತ್ರಕಥೆ ಅತ್ಯುತ್ತಮ ಧ್ವನಿ ಸಂಯೋಜನೆ, ಹಾಗೂ ಇನ್ನೂ ಅನೇಕ ಪ್ರಶಸ್ತಿಗಳಿರುತ್ತದೆ ಎಂದು ವಿವರಿಸಿದರು.

ಚಿತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2025. ಕಿರುಚಿತ್ರಗಳ ಅವಧಿ 1- 40 ನಿಮಿಷಗಳು ಮತ್ತು ಸಾಕ್ಷ್ಯಚಿತ್ರಗಳ ಅವಧಿಗಳು 120 ನಿಮಿಷಗಳವರೆಗೆ ಇರತಕ್ಕದ್ದು.

ಚಿತ್ರಗಳನ್ನು ಅಪ್ಲೋಡ್ ಮಾಡಲು ಈ ವೆಬ್ಸೈಟ್ ಬಳಸಬಹುದು. https://filmfreeway.com/paridrishya

ಹೆಚ್ಚಿನ ವಿವರಗಳಿಗೆ www.mysurucinemasociety.com ಮತ್ತು ಮೊಬೈಲ್ -9980596824/9880435175 ನಲ್ಲಿ ಸಂಪರ್ಕಿಸಬಹುದು.

ಮೈಸೂರು ಸಿನಿಮಾ ಸೊಸೈಟಿ ಅಧ್ಯಕ್ಷ ಚೇತನ್ ಎಂ.ಅವರೊಂದಿಗೆ ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್, ಸಂಯೋಜಕ ಚೇತನ್ ಜಿ ಆರ್, ಜೋಗಿ ಮಂಜು ಮತ್ತಿತರರು ಹಾಜರಿದ್ದು ಬ್ರೋಶರ್ ನ್ನು ಬಿಡುಗಡೆ ಮಾಡಿದರು.