ಕೆಪಿಸಿಸಿ ಸದಸ್ಯ ಜಿ ಶ್ರೀನಾಥ್ ಬಾಬು ಅವರಿಗೆ ಪಿತೃ ವಿಯೋಗ

ಮೈಸೂರು: ಕೆಪಿಸಿಸಿ ಸದಸ್ಯ ಜಿ ಶ್ರೀನಾಥ್ ಬಾಬು ಅವರ ತಂದೆ ಎನ್ ಗೋಪಾಲ್ ಅವರು ನಿಧನ ಹೊಂದಿದ್ದಾರೆ.

ಮೈಸೂರಿನ ಚಾಮರಾಜ ಜೋಡಿ ರಸ್ತೆಯ ನಿವಾಸಿ ಎನ್ ಗೋಪಾಲ್(80) ಅವರು ಸೋಮವಾರ ನಿಧನರಾಗಿದ್ದಾರೆ.

ಅವರು ಆರ್‌ ಎಂ ಸಿ ಬಂಡಿಪಾಳ್ಯದ ವರ್ತಕರಾಗಿದ್ದು,ಅವರ ಹಿರಿಯ ಪುತ್ರ ಜಿ ಶ್ರೀನಾಥ್ ಬಾಬು ಅವರು ಕೆಪಿಸಿಸಿ ಸದಸ್ಯರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಅಪ್ತರು.

ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಒಬ್ಬಳು ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

ಮಂಗಳವಾರ ಮಧ್ಯಾಹ್ನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಅಂತ್ಯಸಂಸ್ಕಾರ ನೆರವೇರಿತು ಎಂದು ಅವರ ಹಿರಿಯ ಪುತ್ರ ಕೆಪಿಸಿಸಿ ಸದಸ್ಯ ಜಿ ಶ್ರೀನಾಥ್ ಬಾಬು ತಿಳಿಸಿದ್ದಾರೆ.