ಬೆಂಗಳೂರು: ಡೀಸೆಲ್, ಹಾಲು, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಮದ್ಯದ ದರ ಏರಿಕೆಗೆ ರಾಜ್ಯ ಸರ್ಕಾರ ಮುಂದಾಗಿದ್ದು ಎಣ್ಣೆ ಪ್ರಿಯಾರಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್ ಆಗಿದೆ.
ಬಿಯರ್ ಮೇಲಿನ ಅಬಕಾರಿ ಸುಂಕವನ್ನ ಶೇ.195 ನಿಂದ ಶೇ 205 ಕ್ಕೆ ಹೆಚ್ಚಿಸುವ ಬಗ್ಗೆ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದ್ದು,
ಇದರ ಬಗ್ಗ ವಾರದೊಳಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.
ಇಷ್ಟೇ ಅಲ್ಲದೆ ಬ್ರಾಂಡಿ, ವಿಸ್ಕಿ, ರಮ್, ಜಿನ್‍ಗಳ ದರವನ್ನು ಕೂಡಾ ಪ್ರತಿ ಕ್ವಾಟರ್‍ಗೆ 10 ರೂ.ನಿಂದ 15 ರೂ. ವರೆಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಅಲ್ಲದೇ ಬಿಯರ್ ದರವನ್ನ 10 ರೂ. ನಿಂದ 20 ರೂ. ವರೆಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಆಲ್ಕೋಹಾಲ್ ಹೆಚ್ಚಿರುವ ಬ್ರ್ಯಾಂಡ್‍ಗಳ ಬಿಯರ್ ಬೆಲೆ ಗಣನೀಯವಾಗಿ ಹೆಚ್ಚಿಸಲು ನಿರ್ಧರಿಸಲಾಗಿದೆ.
ರಾಜ್ಯ ಸರ್ಕಾರದಿಂದ ಎರಡು ವರ್ಷಗಳಲ್ಲಿ ಮೂರನೇ ಬಾರಿಗೆ ಮದ್ಯದ ದರ ಏರಿಕೆಗೆ ತೀರ್ಮಾನಿಸಲಾಗಿದ್ದು,ಪಾಪ ಎಣ್ಣೆ ಪ್ರಿಯರಿಗೆ ನಿಜಕ್ಕೂ ಇದು ಶಾಕಿಂಗ್ ನ್ಯೂಸ್.