ನವದೆಹಲಿ: ಪಾಕಿಸ್ತಾನ ವಿಮಾನಗಳಿಗೆ ಭಾರತವು ವಾಯುಸೀಮೆ ಬಂದ್ ಮಾಡುವ ಮೂಲಕ ಶಾಕ್ ನೀಡಿದೆ.
ಭಾರತದ ವಿಮಾನಗಳಿಗೆ ತನ್ನ ವಾಯುಸೀಮೆಯನ್ನು ಬಳಸದಂತೆ ಪಾಕ್ ನಿರ್ಬಂಧ ಹೇರಿದ ನಂತರ ಭಾರತ ಈ ಕ್ರಮವನ್ನು ಕೈಗೊಂಡಿದೆ.
ಭಾರತ ಮತ್ತು ಪಾಕಿಸ್ತಾನ ಎರಡೂ ಮೇ 23ರ ಮಧ್ಯರಾತ್ರಿವರೆಗೆ ಪರಸ್ಪರ ತನ್ನ ವಾಯುಸೀಮೆಯನ್ನು ಬಳಕೆ ಮಾಡುವುದನ್ನು ನಿರ್ಬಂಧಿಸಿವೆ, ಎರಡು ದೇಶಗಳ ನಡುವಿನ ಪರಿಸ್ಥಿತಿ ಸುಧಾರಣೆಯಾಗದೇ ಇದ್ದರೆ ನಿರ್ಬಂಧ ಮತ್ತೆ ಮುಂದುವರಿಯಲಿದೆ.
ಈ ನಿರ್ಧಾರದಿಂದ ಪಾಕಿಸ್ತಾನ ನೋಂದಾಯಿತ ವಿಮಾನಗಳು ಮತ್ತು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಅಥವಾ ಗುತ್ತಿಗೆ ಪಡೆದ ವಿಮಾನಗಳು, ಮಿಲಿಟರಿ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಬಳಸುವಂತಿಲ್ಲ.
ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನಕ್ಕೆ ಇದರಿಂದ ದೊಡ್ಡ ಪೆಟ್ಟು ಬೀಳಲಿದೆ. ಪಾಕ್ ವಿಮಾನಗಳು ಇನ್ನು ಮುಂದೆ ಮಲೇಷ್ಯಾದ ಕೌಲಾಲಂಪುರಕ್ಕೆ ಹೋಗಬೇಕಾದರೆ ಚೀನಾ ವಾಯುಸೀಮೆಯನ್ನು ಬಳಸಿ ಥಾಯ್ಲೆಂಡ್ ಮೂಲಕ ಸಂಚರಿಸಬೇಕಿದೆ.