ಮೈಸೂರು: ಮೈಸೂರಿನಲ್ಲಿ ಮನೆಕೆಲಸ ಮಾಡುತ್ತಿದ್ದ ಹೆಂಗಸು 2 ಲಕ್ಷ ಮೌಲ್ಯದ 50 ಸೀರೆಗಳು ಹಾಗೂ 30 ಸಾವಿರ ಮೌಲ್ಯದ ಬೆಳ್ಳಿ ಪದಾರ್ಥ ಕಳುವು ಮಾಡಿರುವ ಘಟನೆ ನಡೆದಿದೆ.
ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹ್ಯಾಂಡಿ ಕ್ರಾಫ್ಟ್ಸ್ ವ್ಯವಹಾರ ನಡೆಸುತ್ತಿರುವ ಜಯಕುಮಾರ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದೆ.
ಮನೆಕೆಲಸ ಮಾಡುವ ಭಾಗ್ಯ ಎಂಬಾಕೆ ಮೇಲೆ ಅನುಮಾನ ವ್ಯಕ್ತಪಡಿಸಿರುವ ಜಯಕುಮಾರ್ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.