ಪ್ರಾಧ್ಯಾಪಕರ ಮನೆಯಲ್ಲಿ ನಗದು ಸೇರಿ 15.60 ಲಕ್ಷ ಮೌಲ್ಯದ ಚಿನ್ನಾಭರಣ ಕಳುವು

ಮೈಸೂರು: ಐನಾತಿ ಕಳ್ಳರು ಮನೆಯ ಕಬೋರ್ಡ್ ನಲ್ಲಿದ್ದ ನಗದು ಸೇರಿದಂತೆ 15.60 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ವಿಜಯನಗರ 4 ನೇ ಹಂತದಲ್ಲಿ ಈ ಘಟನೆ ನಡೆದಿದ್ದು,ಮಂಡ್ಯ ಜಿಲ್ಲೆ ವಿ.ಸಿ.ಫಾರಂ ನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುವ ಡಾ.ಸುಮಾ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.

ಮನೆಯಲ್ಲಿ ಅತ್ತೆ ಹಾಗೂ ಮಾವ ಇದ್ದರೂ ಮೊದಲ ಮಹಡಿಯಲ್ಲಿದ್ದ ಕಬೋರ್ಡ್ ನಿಂದ ಕಳ್ಳರು ಚಿನ್ನಾಭರಣಗಳನ್ನ ದೋಚಿ ಪರಾರಿಯಾಗಿದ್ದಾರೆ.

ಈ ಸಂಭಂಧ ವಿಜಯನಗರ ಪೊಲೀಸ್ ಠಾಣೆಗೆ ಡಾ.ಸುಮಾ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.