ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಡಾಲಿ ದಂಪತಿ ಖುಷ್

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ನಟ ಡಾಲಿ ಧನಂಜಯ್‌ ಹಾಗೂ ಪತ್ನಿ ಧನ್ಯತಾ ಭೇಟಿ ನೀಡಿ, ಪ್ರಕೃತಿ ಸೌಂದರ್ಯ ಕಣ್ ತುಂಬಿಕೊಂಡು ಸಂಭ್ರಮಿಸಿದ್ದಾರೆ.

ನಾಗರಹೊಳೆ ಅರಣ್ಯದಲ್ಲಿ ಸಫಾರಿ ಕೈಗೊಂಡಿದ್ದ ಧನಂಜಯ್‌ ಹಾಗೂ ಧನ್ಯತಾ ಅವರು, ಹುಲಿ, ಆನೆ, ಜಿಂಕೆ ಸೇರಿದಂತೆ ಅನೇಕ ಪಕ್ಷಿಗಳನ್ನ ಕಂಡು ಬೆರಗು ಸಹಿತ ಖುಷಿ ಪಟ್ಟಿದ್ದಾರೆ.

ಡಾಲಿ ಧನಂಜಯ ಇದ್ದ ಸಫಾರಿ ವಾಹನದ ಮುಂದೆಯೇ ಹುಲಿಯೊಂದು ರಸ್ತೆಯಲ್ಲಿ ಹೋಗಿದ್ದು, ಹುಲಿಯ ದೃಶ್ಯವನ್ನು ಡಾಲಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ತುಂತುರು ಮಳೆ ನಡುವೆ ನಾಗರಹೊಳೆ ಸಫಾರಿಯಲ್ಲಿ ಪ್ರಾಣಿಗಳನ್ನು ನೋಡಿ ಎಂಜಾಯ್‌ ಮಾಡಿದ ಈ ಜೋಡಿ ಕಬಿನಿ ಹಿನ್ನೀರು ಪ್ರದೇಶದ ಸೌಂದರ್ಯ ಹಾಗೂ ಕಾಡಿನ ರಮಣೀಯ ದೃಶ್ಯವನ್ನು ಕಂಡು ಪುಳಕಿತರಾಗಿದ್ದಾರೆ.