ಹೃದಯಾಘಾತದಿಂದ ನಟಿ ಶೆಫಾಲಿ ಜರಿವಾಲಾ ನಿಧನ

ಮುಂಬೈ: ಕಳೆದ ಒಂದೆರಡು ವರ್ಷಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ,ಅದರಲ್ಲೂ‌ ಹರೆಯದವರು,ಮಧ್ಯವಯಸ್ಕರಲ್ಲೇ ಅತೀ ಹೆಚ್ಚು.

ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಮೇ ತಿಂಗಳಿಂದ ಜೂನ್ 25‌ ರ ವರಗೆ ನಾಲ್ಕೈದು ಮಂದಿ ಯುವಜನರು ಹೃದಯಾಘಾತಕ್ಕೆ ಬಲಿಯಾದ ಉದಾಹರಣೆ ಇದೆ.

ಅಭಿಷೇಕ್ ಮೇ.20,ಸಂಧ್ಯ ಮೇ,ನಿಶಾಂತ್ ಜೂನ್, ಸುಪ್ರೀತಾ ಜೂನ್ 25,ಚೇತನ್, ಹೀಗೆ ಹಲವು ಮಂದಿ ಯುವಜನರೇ ಹೃದಯಾಘಾತದಿಂದ ನಿಧನರಾಗಿದ್ದು ಆತಂಕ ಸಹಾ ಮೂಡಿದೆ.

ಇದೀಗ ಹಿಂದಿ ಬಿಗ್ ಬಾಸ್ 13ರ ಸ್ಪರ್ಧಿಯಾಗಿದ್ದ ನಟಿ ಶೆಫಾಲಿ ಜರಿವಾಲಾ ಕೂಡಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

42 ವರ್ಷದ ಶೆಫಾಲಿ ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ವಾಸಿಸುತ್ತಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಶೆಫಾಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆದರೆ ಅಷ್ಟರಲ್ಲೆ ಮೃತಪಟ್ಟಿದ್ದರು.

ಪುನೀತ್ ರಾಜ್‌ಕುಮಾರ್ ಜೊತೆ ಹುಡುಗರು ಚಿತ್ರದಲ್ಲಿ ನಾ ಬೋರ್ಡು ಇರದ ಬಸ್ಸನು… ಹಾಡಿಗೆ ಶೆಫಾಲಿ ಮಸ್ತ್ ನೃತ್ಯ ಮಾಡಿ ಕನ್ನಡದಲ್ಲೂ ಸದ್ದು ಮಾಡಿದ್ದರು.

ಶೆಫಾಲಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

1982ರ ಡಿಸೆಂಬರ್ 15ರಂದು ಜನಿಸಿದ ಶೆಫಾಲಿ ಮುಂಬೈನಲ್ಲಿ ಬೆಳೆದರು. 2004ರಲ್ಲಿ ಹರ್ಮೀತ್ ಸಿಂಗ್ ಜೊತೆ ವಿವಾಹವಾದರು.
ಬಳಿಕ ವಿಚ್ಛೇದನ ಪಡೆದು 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದರು.

ಕಾಂತಾ ಲಗಾ ಹಾಡಿನ ಮೂಲಕ ಬಾಲಿವುಡ್ ನಲ್ಲೂ ಅವರು ಹೆಸರು ಮಾಡಿದ್ದರು. ಶುಕ್ರವಾರ ತಡರಾತ್ರಿ 11.15ರ ಸುಮಾರಿಗೆ ತೀವ್ರ ಹೃದಯಾಘಾತವಾಗಿದೆ, ಶೆಫಾಲಿ ಅವರನ್ನು ತಕ್ಷಣ ಪತಿ ಪರಾಗ್ ತ್ಯಾಗಿ ಮುಂಬೈನ ಬೆಲ್ಲೆವ್ಯೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಆದರೆ ಅಷ್ಟುಹೊತ್ತಿಗಾಗಲೇ ಶೆಫಾಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.