ಮೈಸೂರು: ಇತ್ತೀಚೆಗೆ ಅಪಘಾತಗಳು ಹೆಚ್ಚಾಗುತ್ತಿವೆ ಈ ನಡುವೆ
ಚಲಿಸುತ್ತಿದ್ದ ಸಾರಿಗೆ ಬಸ್ಸಿನಲ್ಲೇ ಅದರಲ್ಲೂ ಪ್ರಯಾಣಿಕರೇ ಕಂಡಕ್ಟರ್ ಬರ್ತಡೇ ಆಚರಣೆ ಮಾಡಿದ್ದಾರೆ.ಇದನ್ನ ಕುರುಡು ಪ್ರೀತಿ ಅನ್ನಬೇಕಾ ಏನು ಹೇಳಬೇಕು ತಿಳಿಯದಾಗಿದೆ.
ಕಂಡಕ್ಟರ್ ಹುಟ್ಟುಹಬ್ಬವನ್ನು ಮಹಿಳಾ ಪ್ರಯಾಣಿಕರು ಬಸ್ ನ ಇಂಜಿನ್ ಮೇಲೆ ಕೇಕ್ ಇಟ್ಟು ಕತ್ತರಿಸುವ ಮೂಲಕ ಆಚರಿಸಿದ್ದಾರೆ.
ಮಹಿಳೆಯರು ನಗುತ್ತಾ ಮಾತನಾಡುತ್ತಾ ಚಾಲಕನ ಗಮನವನ್ನೂ ತಮ್ಮತ್ತ ಸೆಳೆದಿದ್ದಾರೆ. ಇವರುಗಳ ಹುಚ್ಚಾಟಕ್ಕೆ ಪ್ರಯಾಣಿಕರು ಆತಂಕದಿಂದ ಸರಿಯಾಗಿ ಬಸ್ ಓಡಿಸಪ್ಪ ಎಂದು ಕೂಗಾಡಿದ್ದಾರೆ.
ಇದು ಯಾವ ಮಾರ್ಗದಲ್ಲಿ ಅಂತೀರಾ.
ನಂಜನಗೂಡು ತಾಲೂಕು ಹುಲ್ಲಹಳ್ಳಿ ,ಕಣೇನೂರು ಮಾರ್ಗವಾಗಿ ಎಚ್ ಡಿ ಕೋಟೆಯ ಕಾರಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ನೊಂದಣಿ ಸಂಖ್ಯೆ
KA.09 F 5074 ನಲ್ಲಿ ಈ ರೀತಿ ಬರ್ತಡೇ ಆಚರಿಸಲಾಗಿದೆ.
ದಿನನಿತ್ಯ ಸಂಜೆ 7.30ರ ವೇಳೆಗೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಬಸ್ ನಿಲ್ದಾಣದಿಂದ ಬಿಟ್ಟು ಕಾರಾಪುರಕ್ಕೆ ಈ ಬಸ್ ತೆರಳುತ್ತದೆ.
ನಿನ್ನೆ ರಾತ್ರಿ ಎಂಟು ಗಂಟೆ ವೇಳೆ ಕಣೇನೂರು ಗ್ರಾಮದ ಬಳಿ ಚಲಿಸುತ್ತಿದ್ದ ಬಸ್ಸಿನಲ್ಲಿ ಕೇಕ್ ಕತ್ತರಿಸಿ ಪ್ರಯಾಣಿಕರ ಕೆಂಗಣ್ಣಿಗೆ ಚಾಲಕ ಮತ್ತು ನಿರ್ವಾಹಕ ಗುರಿಯಾಗಿದ್ದಾರೆ ಇದಕ್ಕೆ ಮಹಿಳಾ ಪ್ರಯಾಣಿಕರ ಸಾಥ್ ಇತ್ತು.
ಬರ್ತ್ ಡೇ ಆಚರಿಸಲು ಈ ಜನರಿಗೆ ಚಲಿಸುವ ಬಸ್ ಬೇಕಿತ್ತಾ.ಹಲವು ಪ್ರಯಾಣಿಕರನ್ನ ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿ ಚಸಲಕ,ನಿರ್ವಾಹಕರದ್ದು.
ಆದರೆ ಇವರಿಬ್ಬರು ಬಸ್ ನಲ್ಲಿ ಬೆರಳೆಣಿಕೆಯ ಮಹಿಳಾ ಪ್ರಯಾಣಿಕರ ಪ್ರೀತಿಯ ಹುಡುಗಾಟಕ್ಕೆ ಸ್ಪಂದಿಸಿದ್ದಾರೆ.
ಒಂದು ವೇಳೆ ಈ ಸಂಭ್ರಮದಲ್ಲಿ ಅನಾಹುತ ನಡೆದರೆ ಹೊಣೆ ಯಾರು? ಸಾರಿಗೆ ಸಚಿವರು ಇದನ್ನೆಲ್ಲ ಗಮನಿಸುತ್ತಾರಾ,ಇಂತಹ ಚಾಲಕ, ನಿರ್ವಾಹಕರಿಗೆ ಬುದ್ದಿ ಹೇಳುತ್ತಾರಾ ಕಾದು ನೋಡಬೇಕಿದೆ.