ಮೈಸೂರು: ಮೇಕೆದಾಟು ಯೋಜನೆಯನ್ನು ನಾವು ಮಾಡಯೇ ಮಾಡುತ್ತೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಡಕ್ಕಾಗಿ ಹೇಳಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟ ತಕ್ಷಣ ಮೇಕೆದಾಟು ವಿನಲ್ಲಿ ಕಾರ್ಯ ಶುರು ಆಗತ್ತದೆ ಎಂದು ಸ್ಪಷ್ಟಪಡಿಸಿ ದರು.
ಈಗಾಗಲೇ ಮೇಕೆದಾಟುವಿನಲ್ಲಿ ಕಚೇರಿ ಕೂಡಾ ಮಾಡಿದ್ದೇವೆ ಎಂದು ಹೇಳಿದ ಸಿಎಂ, ನಮ್ಮಲ್ಲಿರುವ ನಮ್ಮ ನೀರನ್ನು ನಾವು ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದೇವೆ, ರಾಜ್ಯದಲ್ಲಿ ಶೇ.6 ರಷ್ಟು ನೀರಾವರಿ ನಾವು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಟ್ರಿಬ್ಯೂನಲ್ ಆರ್ಡರ್ ಪ್ರಕಾರ ತಮಿಳುನಾಡಿಗೆ ನಾವು ನೀರು ಬಿಟ್ಟಿದ್ದೇವೆ, ಕಳೆದ ವರ್ಷ ಕೂಡಾ ಜಾಸ್ತಿ ನೀರು ಬಿಟ್ಟಿದ್ದೇವೆ
ಒಟ್ಟು 22 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದು ಹೇಳಿದರು.
ಒಮ್ಮೊಮ್ಮೆ ಮಳೆ ಸರಿಯಾಗಿ ಆಗದಿದ್ದಾಗ ಒಂದು ವರ್ಷ ಎರಡು ವರ್ಷ ಕಡಿಮೆ ನೀರು ಕೊಟ್ಟಿದ್ದೇವೆ, ಅದು ಬಿಟ್ಟರೆ ಮಿಕ್ಕೆಲ್ಲಾ ವರ್ಷ ನಾವು ಹೆಚ್ಚು ನೀರು ಕೊಟ್ಟಿದ್ದೇವೆ,ಸಂಕಷ್ಟದ ಸಮಯದಲ್ಲಿ ನೀರು ಹಂಚಿಕೆ ಆಗಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು.
ನಮ್ಮ ಸರ್ಕಾರ ಬಂಡೆ ತರ: ಸರ್ಕಾರ ಇರಲ್ಲ ಬೀಳುತ್ತೆ ಎಂಬೆಲ್ಲ ವದಂತಿ ಇದೆಯಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ನಗುತ್ತಾ ನಮ್ಮ ಸರ್ಕಾರ ಬಂಡೆ ತರ 5 ವರ್ಷ ಇರತ್ತೆ ರೀ ಎಂದು ಪ್ರತಿಕ್ರಿಯಿಸಿದರು.
ಅಲ್ಲದೆ ಪಕ್ಕದಲ್ಲೇ ಇದ್ದ ಉಪ ಮುಖ್ಯ ಮಂತ್ರಿ
ಡಿ.ಕೆ.ಶಿವಕುಮಾರ್ ಅವರ ಕೈ ಎತ್ತಿ ತೋರಿಸಿ
ಬಂಡೆ ತರ ನಮ್ಮ ಸರ್ಕಾರ ಇರುತ್ತೆ ನಾವು ಒಗ್ಗಟ್ಟಾಗಿ ಇರುತ್ತೇವೆಎಂದು ಹೇಳಿದ್ದು ಎಲ್ಲರಲ್ಲೂ ನಗು ತರಿಸಿತು.
ಸುರ್ಜೆವಲಾ ಅವರು ರಾಜ್ಯಕ್ಕೆ ಬರುತ್ತಿದ್ದಾರಲ್ಲಾ ಎಂಬ ಮತ್ತೊಂದು ಪ್ರಶ್ನೆಗೆ, ಪಕ್ಷ ಸಂಘಟನೆ ಬಲ ಪಡಿಸಲು ರಾಜ್ಯಕ್ಕೆ ಬರುತ್ತಿದ್ದಾರೆ,ಅವರ ಕೆಲ್ಸ ಅವರು ಮಾಡುತ್ತಾರೆ ಅವರು ಬರುವುದರಲ್ಲಿ ಅಂತಹ ವಿಶೇಷತೆ ಇಲ್ಲ ಎಂದು ಸಿಎಂ ಉತ್ತರಿಸಿದರು.
ಈ ಬಾರಿ ಸಿದ್ದರಾಮಯ್ಯ ದಸರಾ ಉದ್ಘಾಟನೆ ಮಾಡಲ್ಲ ಎಂಬ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದು,
ನಿಮಗೇನು ಅನ್ನಿಸುತ್ತೆ ಎಂದು ಮಾದ್ಯಮದವರನ್ನೇ ಪ್ರಶ್ನಿಸಿ ನಾನು ದಸರಾ ಉದ್ಘಾಟನೆ ಮಾಡುತ್ತೇನೆ ಅದರಲ್ಲಿ ಸಂಶಯ ಬೇಡ ಎಂದು ಹೇಳಿದರು.