ತಾಯ್ನಾಡಿಗೆ ಅನಿವಾಸಿ ಕನ್ನಡಿಗರ ಕೊಡುಗೆ ಅನನ್ಯ-ಹೆಚ್ ಡಿ ಕೆ

ದುಬೈ: ಹೊರ ದೇಶದಲ್ಲಿ ನೆಲೆಸಿ ತಾಯ್ನಾಡಿಗೆ ಅನನ್ಯ ಕೊಡುಗೆ ನೀಡುತ್ತಿರುವ ಚೈತನ್ಯಶೀಲ ಕನ್ನಡಿಗರ ಸಾಧನೆ ಅತ್ಯಂತ ಶ್ಲಾಘನೀಯ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಉಕ್ಕು ಸಚಿವಾಲಯದ ಕಾರ್ಯಕ್ರಮದ ನಿಮಿತ್ತ ದುಬೈ ಪ್ರವಾಸದಲ್ಲಿರುವ ಅವರು ಅಲ್ಲಿನ ಅನಿವಾಸಿ ಕನ್ನಡಿಗರನ್ನು ಭೇಟಿ ಮಾಡಿ‌ ಸೌಹಾರ್ದ ಯುತ ಮಾತುಕತೆ ನಡೆಸಿದರು ಮತ್ತು ಅವರ ಕಾರ್ಯಗಳನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಗತ್ತಿನ 4ನೇ ದೈತ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ,ಈಗ 3ನೇ ಸ್ಥಾನದತ್ತ ನಮ್ಮ ದೇಶ ನಾಗಾಲೋಟದಲ್ಲಿದೆ. ಈ ಹಿನ್ನೆಲೆಯಲ್ಲಿ ಬಲಿಷ್ಠ, ಸಮೃದ್ಧ ಭಾರತ ನಿರ್ಮಾಣಕ್ಕೆ ಕನ್ನಡಿಗರ ಕೊಡುಗೆ ನನಗೆ ಸಂತಸ ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.