ಕರ್ಕಶ ಶಬ್ಧ ಮಾಡುವ ಬೈಕ್ ಸವಾರರಿಗೆ ವಿವಿಪುರಂ ಸಂಚಾರಿ ಪೊಲೀಸರ ಕ್ಲಾಸ್

ಮೈಸೂರು: ಕರ್ಕಶ ಶಬ್ಧ ಮಾಡಿಕೊಂಡು ಸಾರ್ವಜನಿಕರಿಗೆ ಕಿರಿ ಕಿರಿ ಉಂಟುಮಾಡುತ್ತಿದ್ದ ಬೈಕ್ ಸವಾರರಿಗೆ ವಿವಿ ಪುರಂ ಸಂಚಾರಿ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ವಿವಿ ಪುರಂ ವ್ಯಾಪ್ತಿಯಲ್ಲಿ ಕರ್ಕಶವಾಗಿ ಶಬ್ಧ ಮಾಡುತ್ತಿದ್ದ ಸುಮಾರು 5 ಕ್ಕೂ ಹೆಚ್ಚು ಬೈಕ್ ಗಳನ್ನ ವಶಕ್ಕೆ ಪಡೆದು ಸವಾವರರಿಗೆ ಕ್ಲಾಸ್ ತೆಗೆದುಕೊಂಡರು.

ಕಾಳಿದಾಸ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು ಕರ್ಕಶ ಶಬ್ಧ ಮಾಡಿಕೊಂಡು ತೆರಳುತ್ತಿದ್ದ ಬೈಕ್ ಗಳನ್ನ ವಶಕ್ಕೆ ಪಡೆದ ವೇಳೆ ಸವಾರರಿಗೆ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಕೂಡಾ ನಡೆಯಿತು.

ಆದರೆ ಇದನ್ನೆಲ್ಲ ಕೇರ್ ಮಾಡದ ಪೊಲೀಸರು ಬೈಕ್ ಗಳನ್ನು ಠಾಣೆಗೆ ಸಾಗಿಸಿದರು.