ಮೈಸೂರು: ಯುವಕನೊಬ್ಬ ಶಿಕ್ಷಕಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಈ ಘಟನೆ ನಗರದ ಅಶೋಕಪುರಂನಲ್ಲಿ ನಡೆದಿದ್ದು, ಪಾಂಡವಪುರದ ಎಲೆಕೆರೆ ಹ್ಯಾಂಡ್ ಪೋಸ್ಟ್ ನ ನಿವಾಸಿ ಪೂರ್ಣಿಮಾ (36) ಕೊಲೆಗೀಡಾದ ಶಿಕ್ಷಕಿ.
ಕ್ಯಾತನಹಳ್ಳಿ ಗ್ರಾಮದ ಅಭಿಷೇಕ್ ಕೊಲೆ ಮಾಡಿದ ಆರೋಪಿ.
ಅಭಿಷೇಕ್ ಪೂರ್ಣಿಮಾಳನ್ನು ಪ್ರೀತಿಸುತ್ತಿದ್ದ, ಮದುವೆ ಯಾಗುವಂತೆ ಒತ್ತಾಯಿಸಿದ್ದಾನೆ, ಆದರೆ ಆಕೆ ಸ್ಪಂದಿ ಸದ ಕಾರಣ ಆಕೆಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಆಕೆ ತೀವ್ರವಾಗಿ ಗಾಯಗೊಂಡಿದ್ದನ್ನು ಕಂಡು ಆತನೆ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.
ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಆಕೆಗೆ ತಾಳಿ ಕೂಡಾ ಕಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಪೂರ್ಣಿಮಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ನಗರದ ಅಶೋಕಪುರಂ ಠಾಣೆ ಪೊಲೀಸರು ಆರೋಪಿ ಅಭಿಷೇಕ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.