ಯಮೆನ್: ಕೇರಳದ ನಿಮಿಷಾ ಪ್ರಿಯಾ ಎಂಬ ನರ್ಸ್ ಒಬ್ಬರಿಗೆ ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ನಿಮಿಷಾ ಪ್ರಿಯಾ ಗೆ ಜುಲೈ 16 ರಂದು ಗಲ್ಲು ವಿಧಿಸಲು ದಿನ ನಿಗದಿಪಡಿಸಲಾಗಿದೆ. ಯೆಮೆನ್ ಪ್ರಜೆಯ ಕೊಲೆ ಆರೋಪದ ಮೇಲೆ ನರ್ಸ್ ದೋಷಿ ಎಂದು ಸಾಬೀತಾಗಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿ ನಿಮಿಷಾ ಪ್ರಿಯಾ ಅವರು ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದು,
2017 ರಿಂದ ಯೆಮೆನ್ ಜೈಲಿನಲ್ಲಿದ್ದಾರೆ.
ನರ್ಸ್ ನಿಮಿಷಾ ಪ್ರಿಯಾ ಒಂದು ದಶಕದಿಂದ ಯೆಮೆನ್‌ನಲ್ಲಿ ನೆಲೆಸಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆರ್ಥಿಕ ಕಾರಣಗಳಿಂದಾಗಿ ಅವರ ಪತಿ ಮತ್ತು ಮಗಳು ಭಾರತಕ್ಕೆ ಮರಳಿದ ನಂತರ, ಪ್ರಿಯಾ ಯಮೆನ್ ಪ್ರಜೆ ಲಾಲ್ ಅಬೊ
ಮೆಹದಿ ಅವರ ಸಹಾಯದಿಂದ ಯೆಮೆನ್‌ನಲ್ಲಿ ತನ್ನದೇ ಆದ ಕ್ಲಿನಿಕ್ ಇಟ್ಟುಕೊಂಡಿದ್ದರು.
ನಿಮಿಷಾ ಪ್ರಿಯಾಗೆ ಸೇರಿದ ಪಾಸ್ಪೋರ್ಟ್ ಅನ್ನು ಕಿತ್ತುಕೊಂಡಿದ್ದ ಲಾಲ್ ಅಬೊ ಮೆಹದಿ ಎಂಬಾತನಿಂದ ಪಾಸ್‌ಪೋರ್ಟ್ ವಾಪಸ್ ಪಡೆಯಲು ನರ್ಸ್ ಪ್ರಯತ್ನಿಸಿದ್ದರು ಆದರೆ ಆತ ಕೊಟ್ಟಿರಲಿಲ್ಲ.
ಕಡೆಗೆ ಆಕೆ ಹತಾಶಳಾಗಿ ಮೆಹದಿಗೆ ಮತ್ತು ಬರುವ ಇಂಜೆಕ್ಷನ್ ಚುಚ್ಚಿದ್ದಳು.ಅದು ಓವರ್ ಡೋಸ್ ಆಗಿ ಆತ ಮೃತಪಟ್ಟಿದ್ದ. ಇದಾದ ನಂತರ ಆಕೆ ದೇಶ ತೆರೆಯಲು ಮುಂದಾಗಿದ್ದರು.ವಿಷಯ ಗೊತ್ತಾಗುತ್ತಿದ್ದಂತೆ
ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು.
2020 ರಲ್ಲಿ ವಿಚಾರಣಾ ನ್ಯಾಯಾಲಯವು ಮರಣದಂಡನೆ ವಿಧಿಸಿತು ಮತ್ತು ಯೆಮೆನ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ನವೆಂಬರ್ 2023 ರಲ್ಲಿ ನರ್ಸ್ ಮನವಿಯನ್ನು ತಿರಸ್ಕರಿಸಿತು.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಡ್‌ನ ನರ್ಸ್ ನಿಮಿಷಾ ಪ್ರಿಯಾ 2008 ರಲ್ಲಿ ಯೆಮೆನ್‌ಗೆ ತೆರಳಿದ್ದರು.
ಯೆಮೆನ್ ಪ್ರಜೆಯನ್ನು ಹತ್ಯೆಗೈದ ಆರೋಪದಲ್ಲಿ ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಅವರು ಕೇರಳದ ನರ್ಸ್‌ಗೆ ಮರಣದಂಡನೆ ಶಿಕ್ಷೆಯನ್ನು ಅನುಮೋದಿಸಿದ ನಂತರ. ಯೆಮೆನ್ ಪ್ರಜೆಯನ್ನು ಕೊಂದಿದ್ದಕ್ಕಾಗಿ ಆಕೆಗೆ ಶಿಕ್ಷೆ ವಿಧಿಸಲು ನಿರ್ಧರಿಸಿ ದಿನಾಂಕ ನಿಗದಿಗೊಳಿಸಲಾಗಿದೆ.