ಬೆಂಗಳೂರು: ನಾಯಕತ್ವ ಬದಲಾವಣೆ ವಿಷಯ ಡ್ರಾಮಾ ಅಷ್ಟೇ ಎಂದು ಗೃಹಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳು ವಿಶ್ಲೇಷಣೆ ಮಾಡಿದಂತೆ ನಾಯಕತ್ವ ಬದಲಾವಣೆ ಒಯ ಡ್ರಾಮಾ. ನಿಮ್ಮ ಹೇಳಿಕೆಯನ್ನು ನಾನು ಒಪ್ಪಬೇಕಾಗುತ್ತೆ. ಪದೇ ಪದೇ ಇದರ ಬಗ್ಗೆ ಚರ್ಚೆ ಆಗುವುದು, ಅವರೊಂದು ಹೇಳಿಕೆ ಕೊಡುವುದು ನಾನೊಂದು ಹೇಳುವುದು, ಮತ್ತೊಬ್ಬರು ಇನ್ನೊಂದು ಹೇಳೋದು ಆಗಬಾರದು ಎಂದು ತಿಳಿಸಿದರು.
ಆಡಳಿತದಲ್ಲಿ ಯಾವುದೇ ರೀತಿ ತೊಂದರೆ ಇಲ್ಲ. ಮುಖ್ಯಮಂತ್ರಿಗಳು ಆಡಳಿತ ಮಾಡುತ್ತಿದ್ದಾರೆ. ಸುಮ್ಮನೆ ಡ್ರಾಮಾ ಕಂಪನಿ ಓಪನ್ ಮಾಡೋಕೆ ನಂಗೆ ಇಷ್ಟ ಇಲ್ಲ ಎಂದರು.
ನಾಯಕತ್ವದ ಬದಲಾವಣೆ ವಿಚಾರದ ಅಭಿಪ್ರಾಯ ಗಳನ್ನು ಗೌರವಿಸುತ್ತೇವೆ ಎಂಬ ಸುರ್ಜೇವಾಲಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಇದು ನನಗೆ ಗೊತ್ತಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ವಿಶ್ಲೇಷಣೆ ಮಾಡ್ತಾರೆ. ನಾನು ಸ್ಮೂತ್ ಆಗೇ ಇರೋದು, ಅದನ್ನ ಇಲ್ಲಿಗೇ ಬಿಟ್ಟು ಬಿಡೋಣ ಎಂದು ತಿಳಿಸಿದರು.
ನಮ್ಮ ಹೈಕಮಾಂಡ್ ನವರು ಎಲ್ಲವನ್ನೂ ಗಮನಿಸು ತ್ತಾರೆ. ಸಂದರ್ಭ ಬಂದಾಗ ತೀರ್ಮಾನ ಮಾಡುತ್ತಾರೆ. ಈಗ ಅಂತ ಸಂದರ್ಭ ಬಂದಿದೆ ಅಂತ ನಾನು ಹೇಳೋಕೆ ಹೋಗಲಾರೆ ಎಂದು ಪರಮೇಶ್ವರ್ ಹೇಳಿದರು.