ಮೈಸೂರು: ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಕ್ರಿಕೆಟ್ ಗೆಲುವಿನ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ 11 ಜನರಿಗೆ ತಕ್ಷಣ ಐದು ಕೋಟಿ ಪರಿಹಾರ ನೀಡಬೇಕೆಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದರು.
ಮೃತಪಟ್ಟವರ ಕುಟುಂಬಗಳಿಗೆ ಕರ್ನಾಟಕ ಸರ್ಕಾರ, ಭಾರತೀಯ ಕ್ರಿಕೆಟ್ ಮಂಡಳಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಸೇರಿ ತಲಾ ಐದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು.
ಬುಧವಾರ ಮೈಸೂರಿನ ಆರ್ ಗೇಟ್ ವೃತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ವಾಟಾಳ್, ಈ ಬಾರಿ ಮೈಸೂರಿನ ದಸರಾ ಎಲ್ಲರ ದಸರಾವಾಗಬೇಕು ಹಾಗೂ ಚಾಮರಾಜನಗರದಲ್ಲಿ ದಸರಾ ನಿಲ್ಲಿಸಬಾರದು, ಎಂದಿನಂತೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಹೋರಾಟಗಾರರಾದ ನಂಜುಂಡಸ್ವಾಮಿ, ಪಾರ್ಥಸಾರಥಿ, ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಗೋಲ್ಡನ್ ಸುರೇಶ್, ಶಿವಕುಮಾರ್, ರಾಧಾಕೃಷ್ಣ, ಕುಮಾರ್, ಹನುಮಂತಯ್ಯ, ಪ್ರಭಾಕರ್, ರಘು ಅರಸ್, ಬಸವರಾಜು, ರವೀಶ್, ದರ್ಶನ್ ಗೌಡ, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.

