ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮಹಾ ಶನಿ ಶಾಂತಿ ಪೂಜಾ


ಮೈಸೂರು: ಅವಧೂತ ದತ್ತಪೀಠಾಧಿಪತಿ ಶ್ರೀ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಇದೇ ಆಗಸ್ಟ್ 23ರ ಕೊನೆಯ ಶ್ರಾವಣ ಶನಿವಾರದಂದು ಅಮಾವಾಸ್ಯೆ, ಪಿತೃದೇವತಾ ನಕ್ಷತ್ರವಾದ ಮಘಾನಕ್ಷತ್ರವೂ ಕೂಡಿ ಬಂದಿರುವ ಹಿನ್ನೆಲೆಯಲ್ಲಿ ಗುರುದೇವರ ಆದೇಶ ಅನುಗ್ರಹಗಳಿಂದ, ಮಹಾ ಶನಿ ಶಾಂತಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಇದರ ಅಂಗವಾಗಿ ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಶನಿಜಪ, ಶನಿಶಾಂತಿ ಹೋಮ, ತೈಲಾಭಿಷೇಕ, ಶನಿದೀಪ ಸಮರ್ಪಣೆ, ತಿಲಧಾನ್ಯ ಸಮರ್ಪಣೆ ಮುಂತಾದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಈ ಸಾಮೂಹಿಕ ಕಾರ್ಯಕ್ರಮದಲ್ಲಿ ಉಚಿತ ಪಾಸ್ ಪಡೆದು ಭಾಗವಹಿಸುವವರಿಗೆ ಶನಿದೇವರ ಪೂಜೆಯನ್ನು ಮಾಡಿಸಲಾಗುವುದು.

ಆದ್ದರಿಂದ ಭಕ್ತಾದಿಗಳೆಲ್ಲರೂ ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶನಿದೇವರ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಮನವಿ.

ಪೂಜೆ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.