ಮೈಸೂರು: ದೆಹಲಿಯಲ್ಲಿ ಸ್ಪೋಟ ನಡೆದ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಡಿಜಿ-ಐಜಿ ಡಾ.ಸಲೀಂ ಅವರ ಸೂಚನೆ ಮೇರೆಗೆ ಮೈಸೂರಿನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾತ್ರಿ ಮೈಸೂರು ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ, ವಿವಿಧ ಲಾಡ್ಜ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಡಿಸಿಪಿಗಳು ಎಸಿಪಿಗಳು, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಗಳು, ಪೊಲೀಸರು ಎಲ್ಲೆಡೆ ಸಂಪೂರ್ಣ ಪರಿಶೀಲನೆ ನಡೆಸಿದ್ದಾರೆ.
ರೈಲು ನಿಲ್ದಾಣದ ಫ್ಲ್ಯಾಟ್‌ಫಾರಂ ಸೇರಿ ಹಲವು ಕಡೆ ತಪಾಸಣೆ ಮಾಡಲಾಗಿದೆ. ಪ್ರಯಾಣಿಕರ ಲಗೇಜು ಒಳಗೊಂಡಂತೆ ಸಂಪೂರ್ಣ ತಪಾಸಣೆ ಮಾಡಲಾಗಿದೆ.
ತಪಾಸಣೆ ಮತ್ತಷ್ಟು ಚುರುಕುಗೊಳಿಸಲಾಗುತ್ತದೆ, ಮೈಸೂರು ಅರಮನೆ ಸೇರಿದಂತೆ ಪ್ರವಾಸಿ ತಾಣಗಳು, ಮಾಲ್, ಪಾರ್ಕಿಂಗ್ ಸ್ಥಳಗಳು, ಹೋಟೆಲ್, ಲಾಡ್ಜ್‌ಗಳು, ದೇವಸ್ಥಾನಗಳು ಸೇರಿದಂತೆ ಎಲ್ಲಾ ಕಡೆ ಸಂಪೂರ್ಣ ಪರಿಶೀಲನೆ ನಡೆಸಲಾಗುತ್ತದೆ.
ಮೈಸೂರು ನಗರದಲ್ಲಿ ಶಾಂತಿ, ಸುರಕ್ಷತೆ ನಮ್ಮ ಆದ್ಯತೆಯಾಗಿದ್ದು ಸಾರ್ವಜನಿಕರು ಕೂಡಾ ಪೊಲೀಸರಿಗೆ ಸಹಕಾರ ನೀಡುವಂತೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮನವಿ ಮಾಡಿದ್ದಾರೆ.
ಎಲ್ಲಾದರೂ ಅನುಮಾನಾಸ್ಪದ ವಸ್ತುಗಳು, ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡುವ ಮೂಲಕ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಲು ಸಹಕರಿಸಬೇಕೆಂದು ಕಮಿಷನರ್ ಕೋರಿದ್ದಾರೆ.

