ಮೈಸೂರು: ಮೈಸೂರಿನ ಲಷ್ಕರ್ ಠಾಣೆ
ಪೊಲೀಸರು ದ್ವಿ ಚಕ್ರ ವಾಹನ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಿ,ಒಟ್ಟು ರೂ. 2,50,000 ಮೌಲ್ಯದ ಸುಝುಕಿ ಬರ್ಗಮನ್ ಕಂಪನಿಯ 3 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯದಿಂದ ಲಷ್ಕರ್, ಉದಯಗಿರಿ ಹಾಗೂ ನರಸಿಂಹರಾಜ ಪೊಲೀಸ್ ಠಾಣೆಗಳ ತಲಾ ಒಂದೊಂದು ದ್ವಿ ಚಕ್ರ ವಾಹನ ಕಳುವು ಪ್ರಕರಣಗಳು ಬೆಳಕಿಗೆ ಬಂದಿದೆ.

