ನಂಜನಗೂಡು: ಎರಡು ವರ್ಷಗಳಿಂದ ಪತ್ನಿಯಿಂದ ದೂರವಾಗಿದ್ದ ಪತಿ ಇದ್ದಕ್ಕುದ್ದಂತೆ ರಾತ್ರಿ ದಿಢೀರನೆ ಪ್ರತ್ಯಕ್ಷನಾಗಿ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ಕಳಲೆ ಗ್ರಾಮದ ದೊಡ್ಡ ಬೀದಿಯಲ್ಲಿ ತಾಯಿ ಮತ್ತು ಮಕ್ಕಳ ಜೊತೆ ವಾಸವಾಗಿದ್ದ ಸುಧಾ (30) ಎಂಬಾಕೆ ಯನ್ನು ಪತಿ ಮಹೇಶ್ ಕೊಲೆ ಮಾಡಿದ್ದಾನೆ.
13 ವರ್ಷಗಳ ಹಿಂದೆ ಮಲ್ಲಹಳ್ಳಿ ಗ್ರಾಮದ ಮಹೇಶ್ ಜೊತೆ ಸುಧಾಳನ್ನು ವಿವಾಹ ಮಾಡಿಕಿಡಲಾಗಿತ್ತು.
ಇಬ್ಬರ ನಡುವೆ ಕಲಹವಾಗಿ ಎರಡು ವರ್ಷಗಳಿಂದ ದೂರವಾಗಿದ್ದರು.ರಾತ್ರಿ 10 ಗಂಟೆ ಸಮಯದಲ್ಲಿ ಮನೆಗೆ ಬಂದ ಪತಿ ಮಹೇಶ್ ಪತ್ನಿ ಸುಧಾ ನಡುವೆ ಜಗಳವಾಡಿದ್ದಾನೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮನೆಯಲ್ಲಿದ್ದ ರಿಪೀಸ್ ಪಟ್ಟಿಯಿಂದ ಪತ್ನಿಯ ತಲೆಗೆ ಹಲ್ಲೆ ನಡೆಸಿದ್ದಾನೆ.ಹಾಗಾಗಿ ಆಕೆ ಮೃತಪಟ್ಟಿದ್ದಾಳೆ.
ಸ್ಥಳಕ್ಕೆ ಮೈಸೂರು ಜಿಲ್ಲಾ ಎಸ್.ಪಿ.ಮಲ್ಲಿಕಾರ್ಜುನ್ ಬಲದಂಡಿ, ಡಿವೈಎಸ್ಪಿ ರಘು, ವೃತ್ತ ನಿರೀಕ್ಷಕ ಆನಂದ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತಲೆ ಮರೆಸಿಕೊಂಡಿರುವ ಆರೋಪಿ ಮಹೇಶ್ ನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸಿದ್ದಾರೆ.

